ದ.ಕ. ಜಿಲ್ಲೆಯಲ್ಲಿ ಜೂನ್ 1 ರಿಂದ ಖಾಸಗಿ ಬಸ್ ಓಡಾಟ ಆರಂಭ

ಮಂಗಳೂರು: ಜೂನ್ 1 ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಮಾರ್ಗಗಳಲ್ಲಿ ಖಾಸಗಿ ಬಸ್ಸುಗಳ ಓಡಾಟ ಪ್ರಾರಂಭಿಸಲಿವೆ ಎಂದು ಸಿಟಿ ಬಸ್ಸುಗಳ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ತಿಳಿಸಿದ್ದಾರೆ.

 

ಲಾಕ್ ಡೌನ್ ಕಾರಣದಿಂದ ಎಲ್ಲಾ ವಾಹನ ಸಂಚಾರಗಳು ಬಂದ್ ಆಗಿದ್ದವು. ಆದರೆ ಇದೀಗ ಸರಕಾರಿ ಬಸ್ಸುಗಳ ಓಡಾಟ ಪ್ರಾರಂಭವಾಗಿದ್ದು ಜೂನ್ 1 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ಸುಗಳ ಓಡಾಟ ಆರಂಭವಾಗಲಿದೆ. ಇದುವರೆಗೂ ಜಿಲ್ಲಾಡಳಿತ ಖಾಸಗಿ ಬಸ್ಸುಗಳ ಓಡಾಟಕ್ಕೆ ಯಾವುದೇ ಗ್ರೀನ್ ಸಿಗ್ನಲ್ ನೀಡಿಲ್ಲ. ಇದೀಗ ಜೂನ್ 1 ರಂದು ಖಾಸಗಿ ಬಸ್ಸುಗಳ ಓಡಾಟ ಪ್ರಾರಂಭಿಸಲು ಚಿಂತನೆ ನಡೆದಿದೆ ಎಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಜಿಲ್ಲಾಡಳಿತ ಖಾಸಗಿ ಬಸ್ಸುಗಳ ಸಂಚಾರಕ್ಕೆ ಯಾವುದೇ ಮಾರ್ಗಸೂಚಿ ಬಿಡುಗಡೆ ಮಾಡಿಲ್ಲ. ಒಂದು ವೇಳೆ ಜಿಲ್ಲಾಡಳಿತದಿಂದ ನಿರ್ದಿಷ್ಟವಾದ ಮಾರ್ಗಸೂಚಿ ಬಿಡುಗಡೆಯಾದಲ್ಲಿ ಅದರಂತೆಯೇ ನಡೆದುಕೊಳ್ಳಬೇಕಾಗಿದೆ. ಬಸ್ಸುಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ, ಸ್ಯಾನಿಟೈಸರ್, ಅಂತರ ಹೀಗೆ ಹಲವಾರು ಗೊಂದಲಗಳಿದ್ದು, ಜಿಲ್ಲಾಡಳಿತ ಶೀಘ್ರವಾಗಿ ಮಾರ್ಗಸೂಚಿ ಬಿಡುಗಡೆ ಮಾಡಿ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

Leave A Reply

Your email address will not be published.