ಕರಾವಳಿಯಲ್ಲಿ 1ವರ್ಷದ ಮಗು ಸೇರಿದಂತೆ 23 ಮಂದಿಗೆ ಕೊರೊನಾ ಕಂಟಕ

ಬೆಂಗಳೂರು : ಉಡುಪಿಯಲ್ಲೀಗ ಕೊರೊನಾ ಆರ್ಭಟಿಸುತ್ತಿದೆ. ಇಂದು ಒಂದೇ ದಿನ ಉಡುಪಿಯಲ್ಲಿ ಬರೋಬ್ಬರಿ 23 ಮಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ. ಇದರಲ್ಲಿ ಒಂದು ವರ್ಷದ ಮಗು ಸೇರಿದೆ.

ಜಿಲ್ಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂಧಿಗಳಿಗೆ ಸೋಂಕು ಕಾಣಿಸಿಕೊಂಡಿತ್ತು. ಅಲ್ಲದೇ ಮುಂಬೈನಿಂದ ಆಗಮಿಸಿದ್ದ 1 ವರ್ಷದ ಮಗು ಸೇರಿದಂತೆ ಒಟ್ಟು 18 ಮಂದಿಗೆ ಸೋಂಕು ದೃಢಪಟ್ಟಿತ್ತು. ಆದ್ರೆ ಸಂಜೆಯ ಹೆಲ್ತ್ ಬುಲೆಟಿನ್ ನಲ್ಲಿ ಮತ್ತೆ 5 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಈ ಮೂಲಕ ಒಂದೇ ದಿನ 23 ಮಂದಿಗೆ ಕೊರೊನಾ ವ್ಯಾಪಿಸಿದ್ದು, ಕರಾವಳಿಗರಿಗೆ ಆತಂಕ ಮೂಡಿಸಿದೆ.

ಬೆಳಗಿನ ಹೆಲ್ತ್ ಬುಲೆಟಿನ್ ನಲ್ಲಿ 97 ಮಂದಿಗೆ ಕೊರೊನಾ ಸೋಂಕಿರುವುದು ದೃಢಫಟ್ಟಿತ್ತು. ಆದ್ರೀಗ ಸಂಜೆಯ ಬುಲೆಟಿನ್ ನಲ್ಲಿ ಕೊರೊನಾ ಸೋಂಕು ಮತ್ತೆ ಶಾಕ್ ಕೊಟ್ಟಿದ್ದು, ಹೊಸದಾಗಿ 43 ಮಂದಿಗೆ ಕೊರೊನಾ ಕಾಣಿಸಿಕೊಳ್ಳುವ ಮೂಲಕ ಸೋಂಕಿತರ ಸಂಖ್ಯೆ 130ರ ಸಂಖ್ಯೆ ತಲುಪಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 2,089 ಕ್ಕೆ ಏರಿಕೆಯಾಗಿದೆ.

Leave A Reply

Your email address will not be published.