ನರಿಮೊಗರು| ಕೊಡಿನೀರಿನಲ್ಲಿ ಲಾರಿ-ಬೈಕ್ ನಡುವೆ ಅಪಘಾತ

ಪುತ್ತೂರು: ಕಾಣಿಯೂರು ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನರಿಮೊಗರಿನ ಕೊಡಿನೀರು ಎಂಬಲ್ಲಿ ಲಾರಿ ಮತ್ತು ಬೈಕ್ ನಡುವೆ ಅಪಘಾತ ನಡೆದಿದೆ.

 

ಕಾಣಿಯೂರು ಕಡೆಯಿಂದ ಬರುತಿದ್ದ ಲಾರಿ ಮತ್ತು ಪುತ್ತೂರಿನಿಂದ ಹೋಗುತಿದ್ದ ಬೈಕ್ ನಡುವೆ ಅಪಘಾತ ನಡೆದಿದೆ.


ಅಪಘಾತ ರಭಸಕ್ಕೆ ಬೈಕ್ ಸವಾರನಿಗೆ ಗಂಭೀರ ಗಾಯವಾಗಿದ್ದು, ಗಾಯಳುವನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಿದ್ದಾರೆ.

2 ವರ್ಷಗಳ ಹಿಂದೆ ಇದೆ ಸ್ಥಳದಲ್ಲಿ ಬೈಕ್ ಅಪಘಾತ ಸಂಭವಿಸಿ ಇಬ್ಬರು ಯುವಕರು ಮೃತಪಟ್ಟಿದ್ದರು.

ಗಡಿಪಿಲದಿಂದ ನರಿಮೊಗರುವರೆಗೆ ಅತೀ ಹೆಚ್ಚು ಅಪಘಾತಗಳು ಸಂಭವಿಸಿವೆ. ಹಲವು ಪ್ರಾಣಹಾನಿಯೂ ಆಗಿದೆ .

Leave A Reply

Your email address will not be published.