ಬಂಟ್ವಾಳ | ಸೀಲ್ ಡೌನ್ ನಿಂದ ಹೊರಬಂದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳದಲ್ಲಿ ಕೊರೋನಾ ಸೋಂಕು ದೃಢಪಟ್ಟ ಕಾರಣ ಕೆಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ.ಇದರ ನಡುವೆ ಓರ್ವ ವ್ಯಕ್ತಿ ಪೇಟೆಗೆ ಬಂದುದನ್ನು ಗಮನಿಸಿ ಪೋಲಿಸರು ಅವನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ರಾಜ್ಯದಾದ್ಯಂತ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಕೊರೋನಾ ಸೋಂಕು ಕಂಡುಬಂದ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತದೆ. ಹೀಗೆ ಸೀಲ್ ಡೌನ್ ಮಾಡಿದ ಪ್ರದೇಶದಲ್ಲಿ ಯಾರು ಓಡಾಡುವಂತಿಲ್ಲ, ತುರ್ತುಪರಿಸ್ಥಿತಿಗೆ ಮಾತ್ರ ಅವಕಾಶವಿರುತ್ತದೆ ಒಂದು ವೇಳೆ ಅನವಶ್ಯಕವಾಗಿ ಯಾರಾದರೂ ಓಡಾಡುವುದು ಕಂಡುಬಂದಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ.

ಅದೇ ರೀತಿ ಬಂಟ್ವಾಳ ಪೇಟೆ ನಿವಾಸಿ ಅಮರನಾಥ ಬಾಳಿಗ ಅವರು ಸೀಲ್ ಡೌನ್ ಆಗಿರುವ ಪ್ರದೇಶದಿಂದ ಮೆಲ್ಕಾರ್ ಆರ್ ಟಿ ಓ ಕಛೇರಿ ಗೆ ಹೋದ ವಿಷಯ ಪೊಲೀಸರಿಗೆ ದೂರು ಬಂದ ಕಾರಣ ವ್ಯಕ್ತಿಯನ್ನು ವಿಚಾರಿಸಿದ ಬಳಿಕ ಕೊರೊನ ನಿಯಂತ್ರಿಸುವಲ್ಲಿ ನಿರ್ಲಕ್ಷ್ಯ ವಹಿಸಿರುತ್ತಾನೆ ಎಂದು ಅವನ ಮೇಲೆ ಪ್ರಕರಣ ದಾಖಲಿಸಲಾಗಿದೆ.

Leave A Reply

Your email address will not be published.