ಗೂನಡ್ಕ ಮಸೀದಿ ರಂಝಾನ್ ನಸ್ವೀಹತ್ ಸಿಲ್ಸಿಲಾ ಸಮಾರೋಪ

ಬದ್ರಿಯಾ ಜುಮಾ ಮಸೀದಿ ಗೂನಡ್ಕ ಮತ್ತು ಅಧೀನ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ಥಳೀಯ ಖತೀಬ್ ಮುಹಮ್ಮದ್ ಅಲಿ ಸಖಾಫಿ ಮಾದಾಪುರ ಹಾಗೂ ಎಸ್ ವೈ ಎಸ್ ಗೂನಡ್ಕ ಅಧ್ಯಕ್ಷ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ನೇತ್ರತ್ವದಲ್ಲಿ ರಂಝಾನ್ ತಿಂಗಳ ಪೂರ್ತಿ ಆನ್ ಲೈನ್ ಮುಖಾಂತರ ನಡೆದ ವಿವಿಧ ವಿಷಯಗಳ ತರಗತಿ ಗಳ ಸಮಾರೋಪ ಸಮಾರಂಭ ಇಂದು ನಡೆಯಿತು. ಮಸೀದಿ ಅಧ್ಯಕ್ಷ ಹಾಜಿ ಉಮ್ಮರ್ ಪಿ ಎ ಅಧ್ಯಕ್ಷತೆ ವಹಿಸಿ, ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಉದ್ಘಾಟಿಸಿದರು. ಖತೀಬ್ ಮುಹಮ್ಮದ್ ಅಲಿ ಸಖಾಫಿ ಮಾದಾಪುರ ಮುಖ್ಯ ಪ್ರಭಾಷಣ ಮತ್ತು ಪ್ರಾರ್ಥನೆ ಮಾಡಿದರು. ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಷನ್ ರಿ. ಗೂನಡ್ಕ ಅಧ್ಯಕ್ಷ ಮುಹಮ್ಮದ್ ಕುಂಞ್ಞಿ ಗೂನಡ್ಕ, ಬದ್ರಿಯಾ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಪಿ ಕೆ, ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಏ ಟಿ, ಅಲ್ ಅಮೀನ್ ಎನ್ ಆರ್ ಐ ಫೋರಂ ಯುಎಇ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಗೂನಡ್ಕ, ಎಸ್ ಎಸ್ ಎಫ್ ಗೂನಡ್ಕ ಪದಾಧಿಕಾರಿ ಅಬೂಬಕ್ಕರ್ ಸಿದ್ದೀಕ್ ಗೂನಡ್ಕ ಶುಭ ಹಾರೈಸಿದರು. ಮುಅಲ್ಲಿಂ ಹಬೀಬ್ ಹಿಮಮಿ ಖಿರಾಅತ್ ಪಠಿಸಿ, ಎಸ್ ಬಿ ಎಸ್ ಅಧ್ಯಕ್ಷ ಇಸ್ಹಾಖ್ ಸ್ವಾಗತಿಸಿ,ಇಸ್ಹಾಖ್,ಶಫೀಖ್ ಬುರ್ಧಾ ಪಠಿಸಿದರು. ಎಸ್ ವೈ ಎಸ್ ಗೂನಡ್ಕ ಪದಾಧಿಕಾರಿ ಹನೀಫ್ ಝೈನಿ ವಂದಿಸಿದರು. ಕೋವಿಡ್ 19 ಹಿನ್ನೆಲೆಯಲ್ಲಿ ಲೋಕ್ ಡೌನ್ ಜಾರಿಯಲ್ಲಿದ್ದು ಮಸೀದಿಗಳು ಮುಚ್ಚಲ್ಪಟ್ಟಿದೆ. ಹೀಗಿರುವಾಗ ಸೋಶಿಯಲ್ ನೆಟ್‌ವರ್ಕ್ ಮೂಲಕ ಅಗತ್ಯಆರಾಧನಾ ಕರ್ಮಗಳ ಮಾಹಿತಿ ಮತ್ತು ವಿವಿಧ ವಿಷಯಗಳ ತರಗತಿಗಳು ಜನ ಸಾಮಾನ್ಯರಿಗೆ ತಲುಪಿಸಿದ್ದು ಮಾದರೀ ಯೋಜನೆಯಾಗಿ ಸರ್ವರ ಪ್ರಶಂಸೆ ವ್ಯಕ್ತಪಡಿಸಿದರು.

ವರದಿ : ಹಸೈನಾರ್ ಜಯನಗರ

Leave A Reply

Your email address will not be published.