ಸಾಮಾಜಿಕ ಜಾಲತಾಣದಲ್ಲಿ ಡಿವಿ ಸದಾನಂದ ಗೌಡರಿಗೆ ಅವಹೇಳನ | ತನಿಖೆಗೆ ಆಗ್ರಹ

Share the Article

ಸಾಮಾಜಿಕ ಜಾಲತಾಣದಲ್ಲಿ ಕೇಂದ್ರದ ಸಚಿವರಾದ ಡಿ.ವಿ. ಸದಾನಂದ ಗೌಡರ ಹೆಸರನ್ನು ಬರೆದು ಅವರ ಹೆಸರಿನ ಜೊತೆ ಇರುವ ಗೌಡ ಜಾತಿಯನ್ನು ಕೀಳು ಮಟ್ಟದ ಅವಹೇಳನಕಾರಿಯಾದ ಪದವನ್ನು ಬಳಸಿ ನಿಂದಿಸಿರುವುದಾಗಿ ದೂರು ದಾಖಲಿಸಲಾಗಿದೆ.

ಸದಾನಂದರ ಹೆಸರಿನ ಜೊತೆ ಗೌಡ ಸಮುದಾಯಕ್ಕೆ ಅವಮಾನ ಮಾಡಿರುವ ಮುಕ್ಕಾಟಿರ ಅಯ್ಯಪ್ಪ ಎಂಬ ಆರೋಪಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಮಂಗಳೂರು ಕಮಿಷನರಿಗೆ ದೂರು ನೀಡಿ ಅವರ ಮುಖಾಂತರ ಬಂದರು ಸೈಬರ್ ಕ್ರೈಮ್ ಪೋಲಿಸ್ ಠಾಣೆ ಗೆ ತೆರಳಿ ದೂರು ಖಂಡಿಸಿ ದಾಖಾಲಿಸುವಂತೆ ಒಕ್ಕಲಿಗ ಗೌಡರ ಯುವ ಘಟಕದ ವತಿಯಿಂದ ಒತ್ತಾಯಿಸಲಾಯಿತು.

ಈ ಸಂದಭ೯ದಲ್ಲಿ ಪದಾಧಿಕಾರಿಗಳಾದ ಕಿರಣ್ ಬುಡ್ಲೆಗುತ್ತು, ರಾಘವೇಂದ್ರ ,ರಕ್ಷಿತ್ ಪುತ್ತಿಲ, ಸುಂದರ್ GH ,ಮನೋಜ್ ಕುಮಾರ್ ಭಾಗವಹಿಸಿದ್ದರು.

Leave A Reply

Your email address will not be published.