ಖಾಕಿ ತೊಟ್ಟು ಚಲಿಸುತ್ತಿರುವ ಎರಡು ಕಾರುಗಳ ಮೇಲೆ ನಿಂತು ಸ್ಟಂಟ್ ಮಾಡಲು ಹೋದ ‘ ಸಿಂಗಂ ‘ ಇನ್ಸ್ ಪೆಕ್ಟರ್

ಭೋಪಾಲ್ : ಸಿನಿಮಾದ ದೃಶ್ಯವೊಂದನ್ನು ನಿಜಜೀವನದಲ್ಲಿ ಅನುಕರಿಸಲು ಹೋಗಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ದಂಡ ತೆರುವಂತಾಗಿದೆ.

ದಮೋಹ್ ಜಿಲ್ಲೆ ನರಸಿಂಗ್ ಗಢ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ರೇ ದಂಡ ತೆತ್ತ ಅಧಿಕಾರಿ.

ಅಜಯ್ ದೇವಗನ್ ಅಭಿನಯದ ‘ಸಿಂಗಂ’ ಬಹುಶಃ ನೀವೆಲ್ಲರೂ ನೋಡಿರುತ್ತೀರಿ. ಆ ಚಿತ್ರದಲ್ಲಿನ ಜನಪ್ರಿಯ ಸಾಹಸ ದೃಶ್ಯದಂತೆ ಖಾಕಿ ತೊಟ್ಟು ಚಲಿಸುತ್ತಿರುವ ಎರಡು ಕಾರುಗಳ ಮೇಲೆ ಸಮತೋಲನ ಮಾಡಿಕೊಂಡು ನಿಲ್ಲುವ ಸ್ಟಂಟ್ ಮಾಡಿದ್ದಾರೆ. ಅದರ ವಿಡಿಯೋ ಇದೀಗ ವೈರಲ್ ಆಗಿದ್ದು ಜನಮೆಚ್ಚುಗೆ ಪಡೆದಿದೆ. ಆದರೆ ಅವರ ಸಾಹಸ ಕೆಲಸ ಮಧ್ಯಪ್ರದೇಶದ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಸಹ್ಯ ಆಗಿಲ್ಲ.

ಹಾಗಾಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನೋಜ್ ಯಾದವ್ ಅವರಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಯುವ ಜನತೆಗೆ ಇದು ಕೆಟ್ಟ ಸಂದೇಶ ರವಾನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದೆ ಈ ರೀತಿಯ ಯಾವುದೇ ದುಸ್ಸಾಹಸಕ್ಕೆ ಮುಂದಾಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. 

Leave A Reply

Your email address will not be published.