ಇಂದು ರಾತ್ರಿ 8 ಗಂಟೆಗೆ ಮೋದಿ ದೇಶವನ್ನುದ್ದೇಶಿಸಿ ಭಾಷಣ

ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ಧೇಶಿಸಿ ಮಾತನಾಡಲಿದ್ದಾರೆ. ಈ ಬಗ್ಗೆ ಪ್ರಧಾನಿಗಳ ಕಾರ್ಯಾಲಯ ಟ್ವೀಟ್ ಮಾಡಿದ್ದು, ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ಹೇಳಿದೆ.

ದೇಶವಾಸಿಗಳಲ್ಲಿ ಏಕಕಾಲಕ್ಕೆ ಆತಂಕ ಮತ್ತು ತಳಮಳ.

ದೇಶದೆಲ್ಲೆಡೆ ಮೇ 17 ರ ವರೆಗೆ ಲಾಕ್ ಡೌನ್ ಜಾರಿಯಲ್ಲಿದ್ದು, ಈ ಲಾಕ್ ಡೌನ್ ಮತ್ತೆ ಮುಂದುವರಿಸುವ ಸೂಚನೆ ನೀಡುತ್ತಾರೆಯೋ, ಅಥವಾ ಲಾಕ್ ಡೌನ್ ನಿಯಮವನ್ನು ರದ್ದು ಮಾಡುತ್ತಾರೆಯೋ ಎನ್ನುವ ಲೆಕ್ಕಾಚಾರವನ್ನು ಜನ ಮಾಡಲಾರಂಭಿಸಿದ್ದಾರೆ.

ಅಥವಾ ಕೋರೋನಾ ಸಂದರ್ಭದಲ್ಲಿ ಜನರು ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮಾನಸಿಕ ಮತ್ತು ದೈಹಿಕ ಕ್ಷಮತೆಯನ್ನು ಹೇಗೆ ಇಟ್ಟುಕೊಳ್ಳಬೇಕು ಮುಂತಾದ ಜೀವನ ಶೈಲಿಯ ಬಗ್ಗೆ ಮಾತಾಡುತ್ತಾರಾ ಎಂಬ ಕುತೂಹಲವೂ ಕೂಡಾ ಜನರಲ್ಲಿದೆ.

Leave A Reply

Your email address will not be published.