ಪುತ್ತೂರು, ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನ 1100 ಬಿಹಾರದ ವಲಸೆ ಕಾರ್ಮಿಕರು ಇಂದು ಮರಳಿ ಗೂಡಿಗೆ | ಬೀಳ್ಕೊಡಲು ಪುತ್ತೂರು ಶಾಸಕರ ವಾರ್ ರೂಂ ಸಜ್ಜು

Share the Article

ಇವತ್ತು ಬಿಹಾರ ಮೂಲದ 1100 ಮಂದಿ ವಲಸೆ ಕಾರ್ಮಿಕರಿಗೆ ಬಿಡುಗಡೆಯ ದಿನ. ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನಲ್ಲಿ ಬಾಕಿಯಾಗಿರುವ ಬಿಹಾರ ಮೂಲದ ಕಾರ್ಮಿಕರುಗಳು ವಾಪಾಸ್ ತಮ್ಮ ತಾಯ್ನಾಡಿಗೆ ಹೊರಡಲಿದ್ದಾರೆ.

ಅವರಿಗೆ ತಮ್ಮ ತಮ್ಮ ಊರಿಗೆ ತೆರಳಲು ರೈಲಿನ ವ್ಯವಸ್ಥೆ ಮಾಡಲಾಗಿದೆ. ಇವತ್ತು ಮಧ್ಯಾಹ್ನ 2 ಗಂಟೆಗೆ ಪುತ್ತೂರು ರೈಲ್ವೇ ಸ್ಟೇಷನ್ ನಿಂದ ರೈಲಿನ ಮೂಲಕ ಬಿಹಾರಕ್ಕೆ ವಾಪಸ್ ಕಳುಹಿಸಲಾಗುತ್ತಿದೆ.

ಪ್ರಯಾಣದ ಅವಧಿಯ ರೈಲಿನ ಮೂಲಕ ಬಿಹಾರಕ್ಕೆ ವಾಪಸ್ ಕಳುಹಿಸಲಾಗುತ್ತಿದೆ.
ಪುತ್ತೂರು ಶಾಸಕ ಶ್ರೀ ಸಂಜೀವ ಮಠಂದೂರು ಅವರ ವಾರ್ ರೂಮ್ ನ ಪ್ರಾಯೋಜಕತ್ವದಲ್ಲಿ ಪ್ರಯಾಣದ ಅವಧಿಯಲ್ಲಿ ಈ ಬಿಹಾರಿ ಕಾರ್ಮಿಕರಿಗೆ ಸೇವಿಸಲು 5 ಸಾವಿರ ಚಪಾತಿ, ಅಗತ್ಯ ಇತರ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ.

Leave A Reply