ಅಮ್ಮಾ……
ನನ್ನೀ ಜೀವಕೆ ಜಗವನು ತೋರಿದ
ಮೊದಲನೇ ದೇವತೆ ನೀನಮ್ಮ
ಹೊಂದುತ ಬಾಳಲು ಕಲಿಸಿದ
ವಂದಿತ ಶ್ರೀ ಗುರು ನೀನಮ್ಮಾ…
ಬೆಚ್ಚಗಿನ ಆರೈಕೆಯಲ್ಲಿ ತಿನ್ನಿಸುತಿದ್ದೆ ನೀ ಮುದ್ದಾದ ತುತ್ತು
ಜೋಗುಳವ ಹಾಡುತ್ತಾ ಕೊಡುತ್ತಿದ್ದೆ ನೀ ಮುತ್ತು
ತುತ್ತು ಮುತ್ತು ಇದಾಗಿತ್ತು ನಿನ್ನ ಅಮೂಲ್ಯ ಸೊತ್ತು
ಇದರಿಂದ ನನಗಾಗುತಿತ್ತು ಬಲು ಗಮ್ಮತ್ತು….
ಅಮ್ಮ ಎಂಬ ಈ ಜೀವ ಯಾವಾಗಲೂ ಹಸನ್ಮುಖಿ
ತಿಳಿಯದು ಅವಳೆಷ್ಟು ದುಃಖಿ
ತೋರಲು ಎಂದೆಂದಿಗೂ ಅವಳ ಕಷ್ಟವ
ತೀರಿಸದೆ ಬಿಡಳು ನಮ್ಮಷ್ಟವ…..
ಬೈದರೂ ಮುದ್ದಿಸುವಳು
ಹಸಿವಿಲ್ಲದಿದ್ದರು ಉಣಿಸುವಳು
ನೋವಲ್ಲು ನಗುವಳು
ಎಲ್ಲಾ ಬೇಡಿಕೆಗಳಿಗೆ ಸ್ಪಂದಿಸುವ ವಿಸ್ಮಯ ಸ್ವರೂಪಿ ಅವಳು…..
ಕೋಟಿ ಕೋಟಿ ಜನ್ಮವೆತ್ತಿ ದರೂ
ನಿನ್ನ ಋಣವ ತೀರಿಸಲು ಸಾಧ್ಯವಾಗದು…..
ಭೂಮಿಯನ್ನು ಲೇಖನಿ ಯಾಗಿ ಬಳಸಿ
ಸಾಗರವನ್ನು ಶಾಯಿಯಾಗಿ ಬಳಸಿ
ಆಕಾಶವನ್ನು ಪುಟಗಳಾಗಿಸಿ ಬರೆಯ ಹೊರಟರೂ
ಸಾಲದು ಹಿರಿಮೆ ವರ್ಣಿಸಲು ನಿನ್ನ….
ಆದರೂ ಈ ಪುಟ್ಟ ಕವಿತೆ ನಿನಗಾಗಿ
ಇಂತಿ ನಿನ್ನ……ಮಗಳು
ಸೌಮ್ಯ ಗೌಡ
ಮಹಿಳಾ ಕಾಲೇಜು, ಪುತ್ತೂರು