ತಮ್ಮ ಜೀವವನ್ನು ಮುಡಿಪಾಗಿಟ್ಟು ದೇಶಕ್ಕಾಗಿ ದುಡಿಯುವ ಎಲ್ಲಾ ಕೈಗಳಿಗೆ ಒಂದು ನಮನ

ಕೊರೋನ ಎಂಬ ಹೆಮ್ಮಾರಿ ವಿಶ್ವದಾದ್ಯಂತ ಮರಣ ತಾಂಡವವಾಡುತ್ತಿದೆ. ಭಾರತಕ್ಕೂ ಮಹಾಮಾರಿಯ ಕಾಟ ತಪ್ಪಲಿಲ್ಲ, ಈ ಹೆಮ್ಮಾರಿ ದೇಶದಲ್ಲಿ ಬಲಿ ಕೂಡ ಪಡೆದುಕೊಂಡಿದೆ. ಕೊರೋನ ಹರಡುವಿಕೆಯನ್ನು ತಡೆಗಟ್ಟಲು ಭಾರತದಲ್ಲಿ ಲಾಕ್ ಡೌನ್ ಅನ್ನು ಜಾರಿಗೆ ತರಲಾಗಿದೆ. ಲಾಕ್ ಡೌನ್ ನ ನಡುವೆಯೂ ಕೊರೋನ ಕಾರ್ಮೋಡ ಭಾರತದಲ್ಲಿ ಹೆಚ್ಚುತ್ತಿದೆ.

ಹೀಗಿರುವಾಗಲೂ ಕೊರೋನ ಎಂಬ ವೈರಸ್ ಅನ್ನು ತಡೆಗಟ್ಟುವಲ್ಲಿ ವೈದ್ಯರು, ಸೈನಿಕರು, ಪೊಲೀಸರು,ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ಹಗಲು-ರಾತ್ರಿಯೆನ್ನದೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರುಗಳ ಜೊತೆ ಕೆಲವು ಸಂಘ ಸಂಸ್ಥೆಗಳು ಕೂಡ ಕೈಜೋಡಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.
ಇವರೆಲ್ಲರೂ ತನ್ನ ಮನೆಯವರನ್ನು ಮರೆತು ದೇಶಕ್ಕಾಗಿ ಮತ್ತು ದೇಶದ ಜನರಿಗಾಗಿ ದುಡಿಯುತ್ತಿದ್ದಾರೆ. ಇಂಥವರಿಗೆ ಅಭಿನಂದನೆ ಸಲ್ಲಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವೇ ಸರಿ.

ಹಾಗಾಗಿ ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿನ ವಿದ್ಯಾರ್ಥಿಗಳ ತಂಡವೊಂದು ಇವರುಗಳಿಗೆ ವಿಶಿಷ್ಟ ರೀತಿಯಲ್ಲಿ ಅಭಿನಂದನೆ ಸಲ್ಲಿಸಲು ಮುಂದಾಗಿದೆ. ಟೀಮ್ ಚತುರ ಪ್ರೆಸೆಂಟ್ಸ್ ನಮಗಾಗಿ ದುಡಿಯುವ ಮನಗಳಿಗೆ ನಮ್ಮ “ನಮನ” ಎಂಬ ವಿಡಿಯೋ ತುಣುಕು ಮೇ 11 ರಂದು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.