ಸುಬ್ರಹ್ಮಣ್ಯ|ಶಾಸಕರಿಂದ ಗೃಹರಕ್ಷಕ ದಳ ಸಿಬ್ಬಂದಿಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ವರದಿ : ಉದಿತ್ ಕುಮಾರ್ ಬೀನಡ್ಕ

ಸುಳ್ಯ ಕ್ಷೇತ್ರದ ಜನಪ್ರಿಯ ಶಾಸಕರಾದ ಎಸ್.ಅಂಗಾರ ಅವರು ಸುಬ್ರಹ್ಮಣ್ಯದ ಗೃಹರಕ್ಷಕ ಸಿಬ್ಬಂದಿಗಳಿಗೆ ಅಡುಗೆ ಸಾಮಾಗ್ರಿ ಕಿಟ್ ಹಸ್ತಾಂತರಿಸಿದರು.
ಪೊಲೀಸ್ ಇಲಾಖೆಯ ಜೊತೆ ಹಗಲು ರಾತ್ರಿಯೆನ್ನದೆ ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿರು ಗೃಹರಕ್ಷಕ ಸಿಬ್ಬಂದಿಗಳ ಸೇವೆ ಮನಗಂಡ ಅವರು ಸುಮಾರು 30 ಜನ ಸಿಬ್ಬಂದಿಗಳಿಗೆ ಕಿಟ್ ವಿತರಿಸಿದರು.


ಈ ಸಂದರ್ಭದಲ್ಲಿ ಕಮಾಂಡೆಂಟ್ ಡಾ.ಮುರಳಿಮೋಹನ ಚೂಂತಾರ್, ಗೃಹರಕ್ಷಕ ದಳದ ಅಧಿಕಾರಿಗಳು, ಬಿ.ಜೆ.ಪಿ. ಜಿಲ್ಲಾ ಉಪಾಧ್ಯಕ್ಷ ವೆಂಕಟ್ ವಳಲಂಬೆ ಹಾಗು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave A Reply

Your email address will not be published.