ಶ್ರಮಿಕ ಹರೀಶ್ ಪೂಂಜಾ ಅವರ ಉಚಿತ ಬಸ್ ನಲ್ಲಿ ಬೆಳ್ತಂಗಡಿಯಿಂದ ಬೆಂಗಳೂರಿಗೆ ತಲುಪಿದ 9 ಬಸ್ಸುಗಳು

ಬೆಳ್ತಂಗಡಿ : ಮೇ. 9 ರಂದು, ಶನಿವಾರ ರಾತ್ರಿ 9.00 ಕ್ಕೆ ಬೆಳ್ತಂಗಡಿ ಬಸ್ಸು ನಿಲ್ದಾಣದಲ್ಲಿ ಸಂಭ್ರಮದ ವಾತಾವರಣ. ಕೊರೋನಾ ಲಾಕ್ ಡೌನ್ ನ ರಜೆ ಮುಗಿಸಿ ಮತ್ತೆ ತಮ್ಮ ತಮ್ಮ ಕರ್ತವ್ಯಗಳಿಗೆ, ಕೆಲಸಕಾರ್ಯಗಳಿಗೆ ಮರಳಲು ಸಿದ್ದವಾಗಿ ನಿಂತ ಬೆಳ್ತಂಗಡಿಯ ದೇಶವಾಸಿಗಳು ಬಸ್ ನಿಲ್ದಾಣದಲ್ಲಿ ನಿಂತಿದ್ದರು.

ಹಾಗೆ ನಿನ್ನೆ, ಮೇ 9 ರಂದು, ರಾತ್ರಿ 9 ಗಂಟೆಗೆ ಬೆಳ್ತಂಗಡಿಯ ಬಸ್ ನಿಲ್ದಾಣದಿಂದ ಬೆಂಗಳೂರು ಮೆಜೆಸ್ಟಿಕ್ ಬಸ್ಸು ನಿಲ್ದಾಣಕ್ಕೆ (ಕೆಂಪೇಗೌಡ ಬಸ್ಸು ನಿಲ್ದಾಣ) 9 ಬಸ್ಸುಗಳು ಹೊರಟಿವೆ.

ಕೊರೊನಾ ಲಾಕ್ ಡೌನ್ ಸಮಯದಲ್ಲಿ ಬೆಂಗಳೂರು ನಿಂದ ಬೆಳ್ತಂಗಡಿಗೆ ಬಂದು ಈಗ ಪುನಃ ಮತ್ತೆ ಬೆಂಗಳೂರಿಗೆ ವಾಪಾಸು ತೆರಳಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿರುವ ಬೆಳ್ತಂಗಡಿಯ ನಾಗರಿಕರಿಗೆ ತಾಲೂಕಿನ ಜನರನ್ನು ತನ್ನ ಬಂದುಗಳಂತೆ ಕಂಡ ಬೆಳ್ತಂಗಡಿಯ ಶಾಸಕರಾದ ಶ್ರೀ ಹರೀಶ್ ಪೂಂಜ ಅವರ ನೇತೃತ್ವದ ಶ್ರಮಿಕ ತಂಡ ಉಚಿತ ಬಸ್ಸಿನ ವ್ಯವಸ್ಥೆ ಮಾಡಿತ್ತು.

ಇವತ್ತು ಒಂಬತ್ತು ಬಸ್ಸುಗಳ ಜನ ಮತ್ತೆ ಬೆಂಗಳೂರು ಸೇರಿಕೊಂಡಿದ್ದಾರೆ.

Leave A Reply

Your email address will not be published.