ಸುಳ್ಯದ ಗಡಿಭಾಗ ಪೆರಾಜೆಯಲ್ಲಿ ಮಧ್ಯರಾತ್ರಿ ಮರ್ಡರ್

ಸುಳ್ಯದ ಗಡಿ ಭಾಗದಿಂದ ಕೆಲವೇ ಕಿಲೋಮೀಟರುಗಳ ದೂರದಲ್ಲಿರುವ ಕೊಡಗು ಜಿಲ್ಲೆಯ ಪೆರಾಜೆ ಎಂಬಲ್ಲಿ ಓರ್ವ ವ್ಯಕ್ತಿಯನ್ನು ಕಡಿದು ಕೊಲೆ ಮಾಡಲಾಗಿದೆ.

ಕೊಲೆ ಅತ್ಯಂತ ಭೀಭತ್ಸಕರವಾಗಿ ನಡೆದಿದ್ದು, ಸುತ್ತಮುತ್ತ ರಕ್ತದೋಕುಳಿ ಹರಿದಿದೆ.

ಉತ್ತರ ಕುಮಾರ್ ಎಂಬವರನ್ನು ಸಮೀಪದ ಮನೆಯವರು ಮಧ್ಯರಾತ್ರಿ ಕಡಿದು ಕೊಂದಿರುವ ದುರ್ಘಟನೆ ಪೆರಾಜೆಯ ಗ್ರಾಮದ ಪೀಚೆ ಎಂಬಲ್ಲಿ ನಡೆದಿದೆ.

ರಾತ್ರಿ 12 ಗಂಟೆ ಸುಮಾರಿಗೆ ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದ್ದು, ಘಟನೆಗೆ ಕಾರಣ ತಿಳಿದುಬಂದಿಲ್ಲ. ಇಂದು ಬೆಳಿಗ್ಗೆ ಮಡಿಕೇರಿ ಪೋಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ತನಿಖಾ ಕಾರ್ಯ ಭರದಿಂದ ಸಾಗುತ್ತಿರುವುದಾಗಿ ಹೇಳಲಾಗುತ್ತಿದೆ.

ಆಸ್ತಿ ತಕರಾರಿನ ಹಿನ್ನಲೆಯಲ್ಲಿ ತನ್ನ ಮನೆಗೆ ಪಾನಮತ್ತನಾಗಿ ಹೊಕ್ಕ ಮೈದುನನ್ನು ಅತ್ತಿಗೆ ಹಾಗೂ ಆಕೆಯ ಮಗ ಸೇರಿ ಕತ್ತಿಯಿಂದ ಕಡಿದ ಹಾಗೂ ಮೈದುನ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ಪೆರಾಜೆಯಲ್ಲಿ ನಡೆದಿದೆ. ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಕತ್ತಿಯಿಂದ ಕಡಿದ ಅತ್ತಿಗೆ ಮತ್ತು ಆಕೆಯ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೆರಾಜೆ ಗ್ರಾಮದ ಪೀಚೆ ಎಂಬಲ್ಲಿ ನಿನ್ನೆ ಮಧ್ಯರಾತ್ರಿ ಈ ಘಟನೆ ಸಂಭವಿಸಿದೆ. ಪೀಚೆ ಮನೆಯ ಶ್ರೀಮತಿ ಶಾಲಿನಿ ಹಾಗೂ ಉತ್ತರಕುಮಾರ ಎಂಬವರ ಜಾಗ ಅಕ್ಕಪಕ್ಕದಲ್ಲಿದ್ದು, ಸಂಬಂಧದಲ್ಲಿ ಇವರು ಅತ್ತಿಗೆ ಮತ್ತು ಮೈದುನ. ಇವರೊಳಗೆ ಆಸ್ತಿ ತಕರಾರು ಇತ್ತು. ನಿನ್ನೆ ಮಧ್ಯರಾತ್ರಿ ಉತ್ತರಕುಮಾರ ಪಾನಮತ್ತನಾಗಿ ಶಾಲಿನಿಯವರ ಮನೆಯಂಗಳಕ್ಕೆ ಬಂದು ಬೈಯ್ಯತೊಡಗಿದರೆನ್ನಲಾಗಿದೆ. ಅವರು ಮನೆ ಹೊಕ್ಕಲು ಪ್ರಯತ್ನಪಟ್ಟಾಗ ಶಾಲಿನಿ ಮತ್ತು ಆಕೆಯ ಪುತ್ರ ಧರಣೀಧರ ಉತ್ತರಕುಮಾರರಿಗೆ ಕತ್ತಿಯಿಂದ ಕಡಿದರು. ಅಂಗಳದಲ್ಲಿ ಬಿದ್ದ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದರೆನ್ನಲಾಗಿದೆ.

ಇಂದು ಬೆಳಿಗ್ಗೆ ಮಡಿಕೇರಿಯಿಂದ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಶಾಲಿನಿ ಮತ್ತು ಧರಣೀಧರ ಅವರನ್ನು ವಶಕ್ಕೆ ಪಡೆದಿದ್ದಾರೆ.

ಆಸ್ತಿ ವೈಷಮ್ಯ ಕಾರಣ?

ಪೀಚೆ ಮನೆಯ ದಿ.ಸಣ್ಣಯ್ಯ ಮತ್ತು ದಿ.ಮುದ್ದಯ್ಯ ಸಹೋದರರು.

ಸಣ್ಣಯ್ಯ ಗೌಡರ ಪುತ್ರ ದಿ.ಕೇಶವ, ಇವರ ಪತ್ನಿ ಶಾಲಿನಿ. ಮುದ್ದಯ್ಯರವರ ಪುತ್ರ ಉತ್ತರಕುಮಾರ. ಆಸ್ತಿ ವಿಂಗಡಣೆಗೆ ಸಂಬಂಧಿಸಿ ಶಾಲಿನಿ ಹಾಗೂ ಉತ್ತರಕುಮಾರರ ಮಧ್ಯೆ ವಿವಾದವಿತ್ತು. ಅವರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಕೆಲವು ತಿಂಗಳ ಹಿಂದೆ ಶಾಲಿನಿಯವರ ಮನೆಗೆ ಸಂಬಂಧಿಕರೊಬ್ಬರು ಬಂದಿದ್ದಾಗ ಇವರು ಮಾಡಿಕೊಟ್ಟ ಚಹಾದಲ್ಲಿ ವಿಷ ಬೆರೆಸಿದ ಆರೋಪವನ್ನು ಉತ್ತರ ಮತ್ತು ಭವಾನಿಶಂಕರರ ಮೇಲೆ ಶಾಲಿನಿಯವರು ಹೊರಿಸಿದ್ದರು. ಈ ಬಗ್ಗೆ ಶಾಲಿನಿಯವರು ಪೊಲೀಸರಿಗೆ ದೂರನ್ನು ಕೂಡಾನೀಡಿದ್ದರು. ಆದರೆ ಅದು ತನಿಖೆಯಾಗಿಲ್ಲವೆನ್ನಲಾಗಿದೆ.

Leave A Reply

Your email address will not be published.