ನದಿಯ ಬದಿಯಲ್ಲಿ ಸೆಲ್ಫಿ | ನವವಿವಾಹಿತ ಜೋಡಿ ದುರಂತ ಸಾವು

Share the Article

ಆಕೆ ಉಜಿರೆ ಎಸ್ ಡಿ ಎಂ ಕಾಲೇಜು ವಿದ್ಯಾರ್ಥಿನಿ

ಹಾಸನ : ಒಂದು ಸೆಲ್ಫಿ ನವವಿವಾಹಿತ ಜೋಡಿಯೊಂದನ್ನು ಮಸಣಕ್ಕೆ ಕಳುಹಿಸಿದೆ.

ಇತ್ತೀಚೆಗಷ್ಟೇ ಮದುವೆಯಾಗಿದ್ದ ದಂಪತಿಗಳು ಇಬ್ಬರೂ ಅಕ್ಕಪಕ್ಕ ನಿಂತುಕೊಂಡು, ಫೋಟೋ ಕ್ಲಿಕ್ಕಿಸುವ ಮೊದಲು ಮುಖದಲ್ಲೊಂದು ವಿಚಿತ್ರ ನಗು ತಂದುಕೊಂಡು, ನದಿಯ ಸಮೀಪ ಸೆಲ್ಫಿ ಕ್ಲಿಕ್ಕಿಸಲು ಹೋಗಿದ್ದಾರೆ. ಕಾಲು ಜಾರಿ ಆಯ ತಪ್ಪಿ ಬಿದ್ದು ನೀರಲ್ಲಿ ಮುಳುಗಿ ಸಾವನ್ನಪ್ಪಿ ದಾರುಣ ಘಟನೆ ಅವರ ಬದುಕನ್ನೇ ಬಲಿ ತೆಗೆದುಕೊಂಡಿದೆ.

ಹಾಸನ ಜಿಲ್ಲೆಯ ಸಕಲೇಶಪುರದ ತಾಲೂಕಿನ ಹೆನ್ನಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೇಲೂರು ತಾಲೂಕಿನ ಮುರಹಳ್ಳಿ ಗ್ರಾಮದ ಅರ್ಥೇಶ್ (27) ಹಾಗೂ ಹೆನ್ನಲಿ ಗ್ರಾಮದ ಕೃತಿಕಾ (23) ಎಂಬವರೇ ನೀರುಪಾಲಾದ ದುರ್ದೈವಿಗಳು. ಮೃತ ಕೃತಿಕಾ ಉಜಿರೆಯ ಎಸ್ ಡಿ ಎಂ ನ ವಿದ್ಯಾರ್ಥಿನಿ ಎಂದು ಹೇಳಲಾಗಿದೆ.

ಎರಡು ತಿಂಗಳ ಹಿಂದೆಯಷ್ಟೆ ಇವರಿಬ್ಬರ ಮದುವೆಯಾಗಿತ್ತು. ಅರ್ಥೇಶ್ ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿದ್ದ. ಲಾಕ್‍ಡೌನ್ ಕಾರಣ ದಂಪತಿಗಳು ಬೆಂಗಳೂರಿನಿಂದ ಊರಿಗೆ ಬಂದಿದ್ದರು. ಬುಧವಾರ ದಂಪತಿಗಳು ಪತ್ನಿ ಕೃತಿಕಾ ಮನೆಗೆ ಆಗಮಿಸಿದ್ದು, ಆನಂತರ ಗುರುವಾರ ಸಂಜೆ ಒಂದು ಸಣ್ಣ ಟ್ರಿಪ್ ಹೋಗಿ ಬರುತ್ತೇವೆ ಎಂದು ಹೇಳಿ ಬೈಕಿನಲ್ಲಿ ತೆರಳಿದ್ದರು.

Leave A Reply

Your email address will not be published.