ದ.ಕ.ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ 17 ಮಂದಿ ಗುತ್ತಿಗೆ ನೌಕರರು ಕೆಲಸದಿಂದ ವಜಾ

ವರದಿ : ಹಸೈನಾರ್ ಜಯನಗರ

ದ.ಕ ಜಿಲ್ಲೆಯ ವಿವಿಧ ತಾಲೂಕು ಕಚೇರಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ 17 ಮಂದಿ ಅಡಿಷನಲ್ ಆಪರೇಟರ್ಸ್ ಗಳನ್ನು ಕೆಲಸದಿಂದ ವಜಾ ಮಾಡಿರುವ ಮಾಹಿತಿ ತಿಳಿದು ಬಂದಿದೆ.
ಮಂಗಳೂರಿನ ಸಮೃದ್ಧಿ ಎಂಬ ಕಂಪೆನಿಯೊಂದು 17 ಮಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ವಿವಿಧ ತಾಲೂಕು ಕಚೇರಿಗಳಲ್ಲಿ ನೇಮಕ ಮಾಡಲಾಗಿತ್ತು.

ಇದಕ್ಕೆ ಸಂಬಂಧಿಸಿದಂತೆ ಸುಳ್ಯ ತಾಲೂಕು ಕಚೇರಿಯಲ್ಲಿ ಅಟಲ್ ಜಿ ಸೇವಾ ವಿಭಾಗದಲ್ಲಿ ಭರತ್ ಎಂಬುವರು ಡಾಟ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅದರೊಂದಿಗೆ ಪಂಜ ವಲಯದಲ್ಲಿ ವಂದನ ಎಂಬವರು ಕೂಡ ಈ ರೀತಿಯ ಆಪರೇಟರ್ ಹುದ್ದೆಯಲ್ಲಿ ತೊಡಗಿಕೊಂಡಿದ್ದರು.

ಇಲಾಖೆಗಳ ಪ್ರಕಾರ ಈ ಕ್ಷಣ ಎಂಬ ಆಧಾರದ ಮೇಲೆ ಅವರನ್ನು ಒಂದು ವಿಭಾಗದ ಹುದ್ದೆಯ ಡಾಟ ಆಪರೇಟರ್ ಆಗಿ ಸಹಾಯಕ ಕೆಲಸಕ್ಕೆ ನೇಮಿಸಲಾಗುವುದು. ನಂತರ ಆ ಕೆಲಸ ಕೊನೆಗೊಂಡ ತಕ್ಷಣ ಅವರನ್ನು ಹುದ್ದೆಯಿಂದ ಕೈ ಬಿಡಲಾಗುವುದು ಎಂದು ಅಧಿಕಾರಿ ವರ್ಗದವರಿಂದ ತಿಳಿದುಬಂದಿದೆ.

ಲಾಕ್‌ಡೌನ್‌ನಂತಹ ಕಠಿಣ ಪರಿಸ್ಥಿತಿಯಲ್ಲಿಯೂ ನೌಕರರ ಕೆಲಸ ಕಳೆದುಕೊಂಡಿರುವುದು ಭಾರೀ ಸಂಕಷ್ಟಕ್ಕೆ ದೂಡಿದೆ.
ಕಂಪೆನಿಗಳಿಂದ ಯಾರನ್ನೂ ಕೂಡಾ ಕೆಲಸದಿಂದ ವಜಾ ಮಾಡಬಾರದು ಹಾಗೂ ವೇತನವನ್ನು ಸರಿಯಾಗಿ ನೀಡಬೇಕು ಎಂದು ಹೇಳುವ ಸರಕಾರ ತಾಲೂಕು ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವರನ್ನು ಏಕಾಏಕಿ ವಜಾ ಮಾಡಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಅಲ್ಲದೆ ಜಿಲ್ಲಾಡಳಿತ ತಕ್ಷಣ ಇವರನ್ನು ಮರುನೇಮಕ ಮಾಡಬೇಕೆಂದು ನಗರ ಪಂಚಾಯತ್ ಸದಸ್ಯ ರಿಯಾಝ್ ಕಟ್ಟೆಕ್ಕಾರ್ ಆಗ್ರಹಿಸಿದ್ದಾರೆ.

Leave A Reply

Your email address will not be published.