ಕನಕಮಜಲು | ಹಗಲು ಹೊತ್ತಿನಲ್ಲೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಕಾಡುಕೋಣ ದಾಳಿ

ಮತ್ತೆ ಕಾಡುಕೋಣ ಹಗಲು ಹೊತ್ತಿನಲ್ಲೇ ಪ್ರತ್ಯಕ್ಷವಾಗಿದೆ.

ಕನಕ ಮಜಲು ಗ್ರಾಮದ ಮುಗೇರಿ ಎಂಬಲ್ಲಿ ಪ್ರಭಾಕರ ರಾವ್ ಎಂಬವರ ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಎಂಬವರ ಮೇಲೆ ಕಾಡುಕೋಣ ದಾಳಿ ಹಠಾತ್ ದಾಳಿ ಮಾಡಿರುವ ಘಟನೆ ನಡೆದಿದೆ.

ಈ ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು.
ತೋಟದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭ ಕಾಡುಕೋಣ ಕಂಡುಬಂದಿತು. ಇದನ್ನು ನೋಡಿದ ಸತೀಶ್ ಗಾಬರಿಗೊಂಡು ಓಡುತ್ತಿದ್ದಂತೆ ಅವರ ಹಿಂಬದಿಯಿಂದ ಬಂದ ಕಾಡುಕೋಣ ಅವರಿಗೆ ಗುದ್ದಿ ಮುಂದೆ ಹೋಯಿತು. ಗಾಯಾಳು ಸತೀಶ್ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆೆ ನೀಡಲಾಯಿತು.

ಕಾಡುಕೋಣ ದಾಳಿಯ ಮಾಹಿತಿ ಪಡೆದ ಪುತ್ತೂರು ಅರಣ್ಯ ಇಲಾಖೆಯವರು ಫಾರೆಸ್ಟರ್ ಯೋಗೀಶ್ ಅವರ ನೇತೃತ್ವದಲ್ಲಿ ಸತತ ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆಂದು ತಿಳಿದುಬಂದಿದೆ.

Leave A Reply

Your email address will not be published.