ಭೀಕರ ರೈಲು ದುರಂತ | ಹಳಿಯಲ್ಲಿ ಮಲಗಿದ್ದ 17 ಜನರ ಹೊಡೆದುಕೊಂಡು ಹೋದ ಗೂಡ್ಸ್ ಟ್ರೈನ್ !

ಮುಂಬೈ : ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು ಗೂಡ್ಸ್ ರೈಲ್ ಹರಿದ ಪರಿಣಾಮ 17 ಮಂದಿ ವಲಸೆ ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ ವಲಯದಲ್ಲಿ ಇವರು ಕೆಲಸ ಮಾಡುತ್ತಿದ್ದು ಲಾಕ್ಡೌನ್ ನಡುವೆ ಊರಿಗೆ ಹೋಗಲು ಸಜ್ಜಾಗಿದ್ದರು. ಈ ವಲಸೆ ಕಾರ್ಮಿಕರು ರೈಲ್ವೇ ಟ್ರ್ಯಾಕ್ ನಲ್ಲಿ ಮಲಗಿದ್ದರು. ಆ ಸಂದರ್ಭದಲ್ಲಿ ಗೂಡ್ಸ್ ಟ್ರೈನ್ ಬಂದಿದೆ. ಟ್ರ್ಯಾಕ್ ನಲ್ಲಿ ಮಲಗಿದ್ದ ಎಲ್ಲ 17 ಮಂದಿಯನ್ನು ರೈಲು ಹೊಡೆದುಕೊಂಡು ಹೋಗಿದೆ.
ಈಗ ಲಾಕ್ ಡೌನ್ ನ ಕಾರಣದಿಂದ ಎಲ್ಲ ರೈಲುಗಳ ಸಂಚಾರವನ್ನು ರದ್ದುಗೊಳಿಸಿದ ಪರಿಣಾಮ, ಟ್ರ್ಯಾಕ್ ನಲ್ಲಿ ಯಾವುದೇ ರೈಲುಗಳು ಬರಲಾರವು ಎಂದುಕೊಂಡು ಆ 17 ಜನ ಕಾರ್ಮಿಕರೆಲ್ಲ ರೈಲ್ವೆ ಹಳಿಗಳ ಮೇಲೆ ಮಲಗಿದ್ದರು ಎನ್ನಲಾಗಿದೆ.

ಕರ್ಮದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು ರೈಲ್ವೆ ಪೊಲೀಸ್ ಪಡೆ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ

Leave A Reply

Your email address will not be published.