ಕೊರೋನಾ ವೈರಸ್ ಗೆ ಈಗ ಜಗತ್ತಿನ ಮೊದಲ ಲಸಿಕೆ ತಯಾರಾಗಿದೆ | ಇಟಲಿ ಘೋಷಣೆ
ವಿಶ್ವದಾದ್ಯಂತ ಶತಕೋಟಿ ಮಾನವರ ಪ್ರಾಣವನ್ನು ಹಿಂಡುತ್ತಿರುವ ಮಹಾಮಾರಿಗೆ ಕೊನೆಗೂ ಲಸಿಕೆ ತಯಾರಾಗಿದೆ. ಇದೀಗ ಕೊರೊನಾಕ್ಕೆ ಲಸಿಕೆಯನ್ನು ಕಂಡುಹಿಡಿಯಲಾಗಿದೆ ಎಂದು ಇಟಲಿ ಸರಕಾರ ಘೋಷಿಸಿದೆ. ವಿಶ್ವದ ಮೊದಲ ಕೊರೋನಾ ಲಸಿಕೆ ಇದಾಗಲಿದೆ.
ಕೊರೋನಾ ವೈರಸ್ ಗೆ ಔಷಧ ಕಂಡುಹಿಡಿಯಲು ವಿಶ್ವದೆಲ್ಲೆಡೆ ನೂರಾರು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಈ ವೇಳೆ ಆಶಾದಾಯಕ ಬೆಳವಣಿಗೆ ಘಟಿಸಿದ್ದು ವಿಶ್ವದ ಮೊದಲ ಕೊರೋನಾ ಲಸಿಕೆ ರೆಡಿಯಾಗಿದೆ ಎಂದು ಇಟಲಿ ಘೋಷಣೆ ಮಾಡಿದೆ.
ವಿಶ್ವದ ಸಹಸ್ರಾರು ವಿಜ್ಞಾನಿಗಳ ತಂಡ ಕೊರೋನಾ ಸೋಂಕು ತಡೆಯಲು ಲಸಿಕೆ/ಔಷಧ ಕಂಡು ಹಿಡಿಯುವ ಪ್ರಯತ್ನವನ್ನು ಹಗಲಿರುಳು ನಡೆಸಿದ್ದಾರೆ. ಈಗ ಇಟಲಿ ದೇಶದ ರೋಮ್ ನಲ್ಲಿರುವ ಲಾಜ್ಜಾರೋ ಸ್ವಾಲಾಂಜನಿ ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆಯಲ್ಲಿ ಕೊರೋನಾ ಸೋಂಕು ತಡೆಗೆ ಲಸಿಕೆ ಅಭಿವೃದ್ಧಿಪಡಿಸಲಾಗಿದೆ. ಇಲಿ ಮತ್ತು ಮನುಷ್ಯರ ಜೀವಕೋಶದ ಮೇಲೆ ನಡೆಸಲಾದ ಪ್ರಯೋಗ ಯಶಸ್ವಿಯಾಗಿದೆ. ಇಲಿಗಳ ಮೇಲೆ ಈ ಲಸಿಕೆಯನ್ನು ಪ್ರಯೋಗಿಸಿದಾಗ ಅದು ನಿರೀಕ್ಷೆಯಂತೆ ಆಂಟಿ ಬಾಡಿಗಳನ್ನು ಸೃಷ್ಟಿಸಿದೆ. ಮಾನವರ ಜೀವಕೋಶಗಳಲ್ಲಿ ಕೆಲಸ ಮಾಡಿದ ಲಸಿಕೆ ಕೊರೋನಾ ವೈರಾಣು ನಿಷ್ಕ್ರಿಯ ಮಾಡಿದೆ ಎಂದು ಇಟಲಿ ಹೇಳಿಕೊಂಡಿದ್ದು, ಸೆಪ್ಟೆಂಬರ್ ನಲ್ಲಿ ಮನುಷ್ಯರ ಮೇಲೆ ಅಧಿಕೃತ ಹ್ಯೂಮನ್ ಟ್ರಯಲ್ ಪ್ರಯೋಗ ನಡೆಸುವ ಸಂಭವ ಇದೆ.
ವರದಿ : ರಾಜೇಶ್ ಕೆ. ಶೇಣಿ