ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟ
ಲಾಕ್ ಡೌನ್ ಇರುವಂತೆಯೇ ಪ್ರಥಮ ಪಿ ಯು ಸಿ ಯ ಫಲಿತಾಂಶ ಇಂದು ಬರಲಿದೆ.
ಮೇ 5, ಬೆಳಿಗ್ಗೆ 10:00 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.
ಕೋರೋನಾ ಆಟದ ಕಾರಣದಿಂದ ಪೋಷಕರು ಮತ್ತು ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳನ್ನು ಬೇಟಿ ಮಾಡುವುದನ್ನು ನಿಷೇಧಿಸಲಾಗಿದೆ.
ಫಲಿತಾಂಶವು ನೇರ ವಿದ್ಯಾರ್ಥಿಗಳ ಮೊಬೈಲ್ ನಂಬರ್ ಗೆ ತಲುಪಲಿದೆ.
ವಿದ್ಯಾರ್ಥಿಗಳ ಇ ಮೇಲ್ ವಿಳಾಸಕ್ಕೆ ಫಲಿತಾಂಶಗಳನ್ನು ಕಳುಹಿಸಿಕೊಡಲಾಗುತ್ತದೆ.
ಈಗಾಗಲೇ ತಿಳಿಸಿದಂತೆ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಮರು ಪರೀಕ್ಷೆಯನ್ನು ಕಾಲೇಜು ಮಟ್ಟದಲ್ಲಿ ಮಾಡಲು ಬೇಕಾದ ಮಾನದಂಡಗಳನ್ನು ಶೀಘ್ರವೇ ತಿಳಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ಪ್ರಸ್ತುತಪಡಿಸಿದೆ.