ಸುಳ್ಯ | ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಮೊದಲ ದಿನವೇ ಕುಡಿದು ಬೈಕ್ ಚಲಾಯಿಸಿ ಆಕ್ಸಿಡೆಂಟ್
ಸುಳ್ಯ: ಲಾಕ್ ಡೌನ್ ಸಡಿಲಿಸಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ ಮೊದಲ ದಿನವೇ ಕುಡಿದು ಬೈಕ್ ಚಲಾಯಿಸಿದ ಸುಳ್ಯದ ಹುಡುಗನೊಬ್ಬ ರಸ್ತೆಗೆಸೆಯಲ್ಪಟ್ಟು ಗಾಯಗೊಂಡಿದ್ದಾನೆ.
ಸುಳ್ಯದ ಯುವಕನೊಬ್ಬ ವೈನ್ ಶಾಪ್ ನಿಂದ ಮದ್ಯ ಖರೀದಿಸಿ ಆತುರ ಕಾತರ ತಡೆಯಲಾರದೆ ಅದನ್ನು ದಾರಿ ಮದ್ಯದಲ್ಲೇ ಸೇವಿಸಿದ್ದಾನೆ. ಬೈಕ್ ಚಲಾಯಿಸಿಕೊಂಡು ಸುಳ್ಯದ ಚೆನ್ನಕೇಶವ ದೇವಸ್ಥಾನದ ಒಳ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭ ಈತನ ಬೈಕ್ ನಿಯಂತ್ರಣ ತಪ್ಪಿ ಕಂಪೌಂಡೊಂದಕ್ಕೆ ಢಿಕ್ಕಿ ಹೊಡೆದಿದೆ. ಯುವಕ ರಸ್ತೆಗೆ ಎಸೆಯಲ್ಪಟ್ಟ ಪರಿಣಾಮ ಆತನ ಮುಖ, ಕೈಗಳಲ್ಲಿ ತರಚಿದ ಗಾಯಗಳಾಗಿವೆ.
ಆತ ರಸ್ತೆ ಬದಿ ಬಿದ್ದಿರುವುದನ್ನು ಆ ರಸ್ತೆಯಲ್ಲಿ ಬಂದ ಕೆಲವರು ಗಮನಿಸಿ ಸ್ಥಳೀಯರು ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆತನಲ್ಲಿದ್ದ ಬ್ಯಾಗ್ನಲ್ಲಿ ಮದ್ಯದ ಬಾಟಲ್ ಗಳಿದ್ದು, ಬೈಕ್ ಅನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.