ಎಣ್ಣೆಯಲ್ಲಿ ಲವ್ ಮಿಕ್ಸ್ ಮಾಡಿ ಹೊಡೆದರು | ಮದ್ಯದಂಗಡಿ ಓಪನ್ ಆದ ದಿನವೇ ಬಿತ್ತು ಹೆಣ !

ಮೈಸೂರು : ಲವ್ ವಿಚಾರದಿಂದ ಮೂವರು ಸ್ನೇಹಿತರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಮೈಸೂರು ಜಿಲ್ಲೆಯ ಕ್ಯಾತಮಾರನಹಳ್ಳಿಯಲ್ಲಿ ಈ ಕೊಲೆ ನಡೆದಿದೆ. ಲಾಕ್ಡೌನ್ ಸಡಿಲಿಕೆ ಮಾಡಿ ಮದ್ಯದಂಗಡಿ ತೆರೆದ ದಿನವೇ ಮತ್ತಿನಲ್ಲಿ ಒಂದು ಮರ್ಡರ್ ಆಗಿ ಹೋಗಿದೆ.

ರಾಜ್ಯಾದ್ಯಂತ ನಿನ್ನೆ ಮದ್ಯದಂಗಡಿಗಳು ಓಪನ್ ಆದ ಕಾರಣ ಸ್ನೇಹಿತರು ಎಣ್ಣೆ ಪಾರ್ಟಿ ಹಮ್ಮಿಕೊಂಡಿದ್ದರು.
ಕ್ಯಾತಮಾರನಹಳ್ಳಿಯ ಮಧು, ಕಿರಣ್ ಮತ್ತು ಸತೀಶ್ ಮೂವರು ಸೇರಿಕೊಂಡು ಈ ಪಾರ್ಟಿ ಮಾಡಿದ್ದಾರೆ.

ಎಣ್ಣೆ ಪಾರ್ಟಿಯಲ್ಲಿ ಭೂಮಂಡಲದ ಸಕಲ ವಿಚಾರಗಳು ಬಂದು ಹೋಗಿದೆ. ಸ್ನೇಹಿತರು ಕುಡಿದು ನಕ್ಕು ಕುಣಿದಿದ್ದಾರೆ.

ಕೊನೆಗೆ ಲವ್ ವಿಚಾರವೂ ಚರ್ಚೆಗೆ ಬಂದಿದೆ.
ಪಾರ್ಟಿ ವೇಳೆ ಗೆಳೆಯರ ಮಧ್ಯೆ ಲವ್ ಗೆ ಸಂಬಂಧಪಟ್ಟ ವಿಷಯಗಳು ಪ್ರಸ್ತಾಪವಾಗಿ ಜಗಳ ಶುರುವಾಗಿದೆ. ಬಿಸಿಬಿಸಿ ವಾಗ್ವಾದ ಗಳ ಮಧ್ಯೆ ನಶೆಯಲ್ಲಿದ್ದ ಮಧು ಮತ್ತು ಕಿರಣ್ ಎಂಬಿಬ್ಬರು ಸತೀಶ್ ನನ್ನು ಚಾಕುವಿನಿಂದ ಇರಿದು ಬಿಟ್ಟಿದ್ದಾನೆ.

ಕೊಲೆಯ ಬಳಿಕ ಮಧು ಮತ್ತು ಕಿರಣ್ ಓಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.