ಮಣಿಪಾಲದಲ್ಲಿ ಮದ್ಯದಂಗಡಿಯ ಮುಂದೆ ಮಾನಿನಿಯರು !!
ಮರುಭೂಮಿ ಪ್ರದೇಶದಲ್ಲಿ ನಡೆಯುತ್ತಿದ್ದ
ವ್ಯಕ್ತಿಗೆ ನೀರು ಸಿಕ್ಕಿದಂತಾಗಿದೆ ಈ ಮದ್ಯ ಪ್ರಿಯರ ಪರಿಸ್ಥಿತಿ. ಸುಮಾರು ಒಂದು ತಿಂಗಳಿನಿಂದ ಮದ್ಯ ಕುಡಿಯದೇ ಇದ್ದ ವಿದ್ಯಾರ್ಥಿನಿಯರು, ಭಗಿನಿಯರು ಕೂಡ ಸೋಮವಾರ ಮದ್ಯಕ್ಕಾಗಿ ಸಾಲು ನಿಂತ ದೃಶ್ಯ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಕಂಡು ಬಂತು.
ಸರಕಾರ ಇಂದಿನಿಂದ ಮದ್ಯ ಮಾರಾಟಕ್ಕೆ ಅಸ್ತು ನೀಡಿರುವ ಹಿನ್ನಲೆಯಲ್ಲಿ ಸೂರ್ಯನ ತಾಪವನ್ನು ಲೆಕ್ಕಿಸದೆ ಕಲರ್ ಕಲರ್ ಛತ್ರಿ ಹಿಡಿದ ಕೆಲವೊಂದು ವಿದ್ಯಾರ್ಥಿನಿಯರು ಸಾಲಲ್ಲಿ ನಿಂತು ಮದ್ಯ ಕೊಂಡುಕೊಳ್ಳುವ ಚಿತ್ರಣ ಕಂಡುಬಂದಿದೆ.
ಹಾಸ್ಟೆಲ್ಗಳಲ್ಲಿ ಮತ್ತು ಪಿಜಿಗಳಲ್ಲಿ ಬಂಧಿಯಾಗಿದ್ದ ಕೆಲವು ವಿದ್ಯಾರ್ಥಿನಿಯರು ಎಣ್ಣೆ ಸಿಗದೇ ಕಂಗೆಟ್ಟಿದ್ದರು. ಇದೀಗ ಇಂತಹವರಿಗೆ ಎಣ್ಣೆ ಸಿಕ್ಕಿದ್ದು ಸಂತೋಷ ತಡೆಯಲಾಗುತ್ತಿಲ್ಲ. ಈ ಸಂತಸದ ನಡುವೆ ನಿಯಮಗಳನ್ನು ಮರೆತಿದ್ದಾರೆ ಎಂದು ಕಾಣುತ್ತದೆ.
ಬೇಸರದ ಸಂಗತಿ ಎಂದರೆ ಕೂಲಿಕಾರ್ಮಿಕರ ಸಾಲಿನಲ್ಲಿ ಕಂಡುಬಂದ ಸಾಮಾಜಿಕ ಅಂತರ ಈ ಶಿಕ್ಷತ ವಿದ್ಯಾರ್ಥಿನಿಯರಲ್ಲಿ ಕಂಡುಬರಲಿಲ್ಲ. ಅದೇ ನಗರ ಪ್ರದೇಶದ ಜನರಿಗೂ ಹಳ್ಳಿಯಲ್ಲಿ ವಾಸಿಸುವ ಜನರಿಗೆ ಇರುವ ವ್ಯತ್ಯಾಸ.