ಸುಳ್ಯ | ನಿನ್ನೆ ಸುರಿದ ಗಾಳಿ ಮಳೆಯಿಂದ ಕೃಷಿ, ವಿದ್ಯುತ್, ಮನೆಗಳಿಗೆ ಅಪಾರ ಪ್ರಮಾಣದ ಹಾನಿ

ಸುಳ್ಯ: ತಾಲೂಕಿನಾದ್ಯಂತ ನಿನ್ನೆ ರಾತ್ರಿ ಭರ್ಜರಿ ಮಳೆಯಾಗಿದೆ. ಗುಡುಗು ,ಗಾಳಿ ಸಹಿತ ಭಾರಿ ಮಳೆಯಾಗಿದ್ದು ಇದರಿಂದ ಭಾರಿ ಪ್ರಮಾಣದ ಹಾನಿ ಉಂಟಾಗಿದೆ.

ಗಾಳಿಯ ತೀವ್ರತೆ ಅತಿಯಾಗಿ ಇದ್ದ ಕಾರಣ ತಾಲೂಕಿನ ಹಲವೆಡೆ ಮರಗಳು ಧರೆಗುರುಳಿವೆ. ಕೆಲವು ಮರಗಳು ಮನೆಗಳ ಮೇಲೆ ಬಿದ್ದಿದ್ದು ಇದರ ಪರಿಣಾಮವಾಗಿ ಕುಸಿತ ಉಂಟಾಗಿದೆ. ಅದೇರೀತಿ ಗಾಳಿಯ ರಭಸಕ್ಕೆ ಮನೆಯ ಮೇಲ್ಚಾವಣಿ ಹಾರಿ ಹೋಗಿರುವ ಘಟನೆಗಳು ವರದಿಯಾಗಿವೆ. ತಾಲೂಕಿನಾದ್ಯಂತ ಹಲವಾರು ರಸ್ತೆಗಳು ಮರಗಳು ಬಿದ್ದು ಬಂದ್ ಆಗಿವೆ.

ಹಲವಾರು ಕಡೆ ಭಾರಿ ಗಾತ್ರದ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿವೆ. ಇದರಿಂದಾಗಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇಂದು ತಾಲೂಕಿನಲ್ಲಿ ವಿದ್ಯುತ್ ಸರಬರಾಜಿನಲ್ಲಿ ತೀವ್ರ ಅಡಚಣೆ ಎದುರಾಗಿದೆ.

ವರದಿ : ರಾಜೇಶ್. ಕೆ ಶ್ರೇಣಿ

Leave A Reply

Your email address will not be published.