ನಿನ್ನೆ ಮೇ ದಿನ ಇತ್ತು, ಕಾರ್ಮಿಕರ ದಿನದ ಬಗ್ಗೆ ಅರಿವು ಮೂಡಿಸಬೇಕು

ವಿಶ್ವದ ಬಹುತೇಕ ರಾಷ್ಟಗಳಲ್ಲಿ ಕಾರ್ಮಿಕ ಸಂಘಗಳು ಮತ್ತು ಸಮಾಜವಾದಿ ಪಕ್ಷಗಳು ಮುಖ್ಯವಾಗಿ ಆಚರಿಸುವ ಸಂಭ್ರಮದ ಸಾರ್ವಜನಿಕ ಉತ್ಸವ ದಿನ. ಈ ದಿನವನ್ನು ” ಮೇ ದಿನ ” ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಎಂದು ಆಚರಿಸಲಾಗಿದೆ. ಈ ದಿನದಂದು ಕಾರ್ಮಿಕ ಆಂದೋಲನದ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ. ಅದೆಷ್ಟೋ ಕಾರ್ಮಿಕರು ತನ್ನ ಜೀವನವನ್ನು ಸಾಗಿಸಲು ಒಂದು ದಿನವೂ ಗೈರು ಆಗದೆ ತನ್ನ ಕೆಲಸಗಳಿಗೆ ಹೋಗುತ್ತಾರೆ. ಯಾವುದೇ ಮಳೆ ಬರಲಿ, ಬಿಸಿಲೇ ಬರಲಿ ತನ್ನ ತಲೆ ಮೇಲೆ ಟವಲ್, ಕ್ಯಾಪ್ ಹೆಲ್ಮೆಟ್ ಗಳನ್ನು ಹೊದ್ದು, ಹಾಕಿಕೊಂಡು ತನ್ನ ಕೆಲಸದ ಕಡೆ ಗಮನ ಹರಿಸುತ್ತಾರೆ. ಎಷ್ಟು ಕಷ್ಟ ಇದ್ದರು ತನ್ನ ಹೊಟ್ಟೆ ಪಾಡಿಗಾಗಿ ಹಾಗೂ ಜೀವನ ನಡೆಸಲು ಉರಿ ಬಿಸಿಲಲ್ಲೂ, ಮಳೆಯಲ್ಲೂ ರಾತ್ರಿ-ಹಗಲೆನ್ನದೆ ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಾರೆ. ಬೆಳಗ್ಗೆ ಬೇಗನೆ ಎದ್ದು ಹೊರಟರೆ ಆಮೇಲೆ ಕತ್ತಲೆಯಾಗುವ ಸಮಯಕ್ಕೆ ತನ್ನ ಗುಡಿಗೆ ಸೇರಿಕೊಳ್ಳುತ್ತಾರೆ.

ಹೀಗೆ ಜೀವನ ನಡೆಸುತ್ತಿದ್ದಾರೆ. ಅವರು ಮಾಡುವ ಪ್ರತಿಯೊಂದು ಕೆಲಸದ ಮೇಲೆ ತನ್ನ ಬೆವರ ಹನಿ ಕೂಡ ಕೆಲಸ ಮಾಡುವ ಹಾಗೇ ಕಾಣುತ್ತದೆ. ಅಂದರೆ ಅಷ್ಟು ಶ್ರಮ ಪಟ್ಟು ಕೆಲಸ ಮಾಡುತಿದ್ದರೆ. ನಾವೆಲ್ಲ ಅವರ ಬಗ್ಗೆ ಯೋಚನೆಯೇ ಮಾಡದೇ ನಮ್ಮ ದಾರಿಯಲ್ಲಿಯೇ ಸುಖಬೋಗಿಯಾಗಿ ನಡೆಯುವುದನ್ನು ಮಾತ್ರ ಯೋಚನೆ ಮಾಡುವುದು, ಹಾಗಾಗಿ ಕಷ್ಟದ ಬೆಲೆ ಗೊತ್ತಿಲ್ಲ.

ನಗರ ಪ್ರದೇಶಗಳು ಸ್ವಚ್ಛವಾಗಿರುವುದರಿಂದ ಎಲ್ಲರೂ ನೆಮ್ಮದಿಯಿಂದ ಬದುಕುತ್ತಾರೆ. ಆದರೆ ನಗರವನ್ನು ಸ್ವಚ್ಛ ಮಾಡಿ ಸುಂದರವಾಗಿಡುವ ಪೌರ ಕಾರ್ಮಿಕರ ಬದುಕು ಮಾತ್ರ ಬೀದಿಗಳೇ ಆಗಿ ಬಿಟ್ಟಿದೆ. ಬೆಂಗಳೂರಿನಂತಹ ಮಹಾ ನಗರಗಳಲ್ಲಿ ಇರುವ ಕಾರ್ಮಿಕರು, ತಮಗಿರುವ ಸಂಬಳದಲ್ಲಿ ಬದುಕಲೂ ಆಗದೇ ತನ್ನ ಜೀವನ ನಡೆಸುವುದಕ್ಕೆ ರಸ್ತೆ ಬದಿಗಳಲ್ಲಿ ಟೆಂಟ್, ಗುಡಿಸಲು ಕಟ್ಟಿಕೊಂಡು ಜೇವನವನ್ನು ಸಾಗಿಸುತ್ತಿದ್ದಾರೆ.

ಬೆಳಗ್ಗಿನ ಜಾವ ನಾವು ವಾಕಿಂಗ್ ಆಗಲಿ ರಸ್ತೆಯಲ್ಲಿ ಓಡಾಡುವಾಗ ರಸ್ತೆಗಳನ್ನು ನೋಡಿದರೆ ನಮ್ಮ ಮನಸ್ಸು ಒಮ್ಮೆ ಶಾಂತವಾಗುತ್ತದೆ. ನಮ್ಮ ಕಣ್ಣುಗಳು ಕೂಡ ಅರಳುತ್ತವೆ. ಅದೇ ಗಲೀಜು ಗಲೀಜಾಗಿದ್ದಾರೆ, ರಸ್ತೆ ಗುಡಿಸುವರ ಮೇಲೆ ಬೈಗುಳಗಳ ಸುರಿಮಳೆಯೇ ಪ್ರಾರಂಭವಾಗುತ್ತದೆ. ಆದರೆ ಅದೇ ಜಾಗದಲ್ಲಿ ನಾವು ಇದ್ದೇವೆ ಎಂದು ಯೋಚನೆ ಮಾಡಿ ನೋಡಿದರೆ, ಎಷ್ಟು ಕಷ್ಟ ಇದೆ ಎಂಬುದು ಅರಿವಾಗಬಹುದು. ನಾವು ಅವರಿಗೆ ಬೈದು ನೀವು ಹಣಗಾಗಿ ಕೆಲಸ ಮಾಡುದ ಎಂದು ಬೈದು ಬಿಡುತ್ತೆವೆ. ನಾವು ಐಷರಾಮಿಯಾಗಿ ರಸ್ತೆಯಲ್ಲಿ ಓಡಾಡುತ್ತೆವೆ. ಅವರು ತನ್ನ ಬೆವರ ಹನಿಗಳನ್ನು ಒರೆಸಿಕೊಂಡು ಕೊಳಕು, ಗಲೀಜು, ಅಸಹ್ಯ ಎಂಬ ಪದಗಳನ್ನಾಡದೇ, ಎಲ್ಲ ಕೆಲಸಗಳನ್ನು ಸಮಾಧಾನದಿಂದಲೇ ಸ್ವಚ್ಛ ಮಾಡುವ ಅವರ ಬದುಕು ಮಾತ್ರ ಶೋಚನೀಯ. ಪೊರಕೆ ಹಿಡಿದು ತಳ್ಳುಗಾಡಿಗಳಲ್ಲಿ ಕಸವನ್ನು ತುಂಬಿ ರಸ್ತೆಗೆ ಅಂದ ತರುವ ಪೌರ ಕಾರ್ಮಿಕರ ಜೀವನ ಕ್ರಮದ ಬಗ್ಗೆ ಯಾರಾದರೂ ಯೋಚಿಸಿದ್ದೀರಾ? ಕಷ್ಟಪಡುವ ಪ್ರತಿಯೊಬ್ಬ ಕಾರ್ಮಿಕರ ಜೀವನದ ಬಗ್ಗೆ ಯೋಚನೆ ಮಾಡಬೇಕು. ಬಹುತೇಕ ಕಾರ್ಮಿಕರಿಗೆ ಕಾರ್ಮಿಕ ದಿನಾಚರಣೆ ತಮ್ಮ ಹಕ್ಕು ಸವಲತ್ತುಗಳ ಬಗ್ಗೆ ಅರಿವೇ ಇಲ್ಲದೇ ದುಡಿಮೆಯಲ್ಲಿ ತಲ್ಲಿನರಾಗಿ ಬೆವರುಸುರಿಸುತ್ತಿದ್ದಾರೆ.

ಪ್ರತಿಯೊಂದು ಜಿಲ್ಲೆಗಳಲ್ಲಿ ಅನೇಕ ಕಾರ್ಮಿಕರು ಒಟ್ಟಾರೆ ಭಾರತ ದೇಶದಲ್ಲಿ ಕಾರ್ಮಿಕರು ಶೋಷಣೆಯಲ್ಲೇ ಬದುಕು ಸಾಗಿಸುತಿದ್ದು, ಶ್ರೀಮಂತರು ಶ್ರೀಮಂತರಗಿಯೇ ಮುಂದುವರೆದರೆ ಬಡವರು ಬಡವರಾಗಿಯೇ ಸಾಗುತ್ತಿದ್ದಾರೆ. ಇಂತಹ ಶೋಷಣೆಯ ವಿರುದ್ಧ ಕಾರ್ಮಿಕ ಒಕ್ಕೂಟಗಳಲ್ಲಿ ಐಕ್ಯತೆಯನ್ನು ಕಾಪಾಡಿಕೊಂಡು ಹೋರಾಟ ಮಾಡಲು ಸದಾಕಾಲ ಶ್ರಮಿಸುತ್ತೀರಬೇಕು. ಆಗ ಶೋಷಣೆಗಳು ನಿಲ್ಲಬಹುದು. ಇದು ಕಾರ್ಮಿಕರ ಐಕ್ಯತೆಯಿಂದ ಮಾತ್ರ ಸಾಧ್ಯ ಆಗಬಹುದು. ಸಾಮಾನ್ಯವಾಗಿ ದೈಹಿಕ ಇಲ್ಲವೇ ಬೌದ್ಧಿಕ ಶ್ರಮವನ್ನು ಮಾರಾಟ ಮಾಡಿ ಹಣ ಗಳಿಸುವರಿಗೆ ಕಾರ್ಮಿಕರರು ಎನ್ನಬಹುದು. ಎಲ್ಲಾ ಕಾರ್ಮಿಕರಿಗೆ, ಕಾರ್ಮಿಕ ದಿನದ ಶುಭಾಶಯಗಳನ್ನು ಕೋರುವ.

ರಸಿಕ ಕೆ. ಮುರುಳ್ಯ
ಪ್ರಥಮ ಪತ್ರಿಕೋದ್ಯಮ ವಿಭಾಗ,
ವಿವೇಕಾನಂದ ಕಾಲೇಜು ನೆಹರು ನಗರ, ಪುತ್ತೂರು.

Leave A Reply

Your email address will not be published.