ಬೇಸಿಗೆಗಾಲದಲ್ಲೂ ಕಾಣಲೇ ಸಿಗದ ಮಣ್ಣಿನ ಹೂಜಿ | ಹೂಜಿಗಳ ಮೇಲೆ ಹೂಡಿಕೆ ಮಾಡಿ !

ಬೇಸಿಗೆಗಾಲ ಅಂದ ಕೂಡಲೇ ಮಕ್ಕಳಿಗೆಲ್ಲ ಐಸ್ ಕ್ಯಾಂಡಿ ಗಳು, ಕ್ರೀಮ್ ಪಾರ್ಲರ್ ಗಳು ಬೇಗನೆ ನೆನಪಾಗೋದು. ಹಾಗೂ ಮನೆಯವರೆಲ್ಲರೂ ಕೋಲ್ಡ್ ಬಾಟಲ್ ನೀರನ್ನೇ ಹೆಚ್ಚಾಗಿ ಕುಡಿಯೋದು.

ಆದರೆ ಹಿಂದಿನ ಕಾಲದಲ್ಲಿ ಅಂತಹ ಐಸ್ ಕ್ರೀಮ್ ಪಾರ್ಲರ್ ಗಳಾಗಲಿ ಈಗಿರುವ ಫ್ರೀಡ್ಜ್ ಗಳಂತ ತಂತ್ರಜ್ಞಾನವಾಗಲಿ ಇರಲಿಲ್ಲ. ಆಗ ಇದ್ದದ್ದು ತಣ್ಣನೆಯ ಬಾವಿಯ ನೀರು ಮತ್ತು ಆ ನೀರನ್ನು ಮಣ್ಣಿನ ಹೂಜಿಯಲ್ಲಿ ಒಂದಷ್ಟು ಕಾಲ ಸಂಗ್ರಹಿಸಿ ಇಟ್ಟರೆ ಮುಗಿಯಿತು. ಸ್ಪಲ್ಪ ಸಮಯದ ಬಳಿಕ ನೋಡಿದರೆ ಅದರಲ್ಲಿ ಇರುವ ನೀರು ತಂಪಾಗಿರುತ್ತಿತ್ತು. ಆಮೇಲೆ ಆ ನೀರನ್ನು ಕುಡಿಯುತ್ತಿದ್ದರು.

ಈಗಿನ ಕಾಲದಲ್ಲಿ ತಂತ್ರಜ್ಞಾನ ಹೆಚ್ಚಾಗಿದೆ. ಜನರೆಲ್ಲ ಬದಲಾಗಿಯೇ ಬಿಟ್ಟಿದ್ದಾರೆ. ಯಾರಿಗೆ ಬೇಕು ಈ ಕಾಲದಲ್ಲಿ ಮಣ್ಣಿನ ಹೂಜಿ ? ಪಾರ್ಲರ್ ಳಲ್ಲಿರುವಂತಹ ಐಸ್ ಕ್ರೀಮ್ ಗಳನ್ನು ತಿನ್ನುವುದು, ಜ್ಯೂಸ್ ಕುಡಿಯುವುದು ಮತ್ತು ಬಾಯಾರಿದಾಗಲೆಲ್ಲ ಫ್ರಿಡ್ಜ್ ಓಪನ್ ಮಾಡಿದರೆ ಪೇರಿಸಿಟ್ಟ ಹಲವು ನೀರಿನ ಬಾಟಲಿಗಳು ಸಿಗುತ್ತವೆ. ಯಾವುದನ್ನಾದರೂ ಎತ್ತಿಕೊಂಡು ಗಂಟಲಿಗೆ ಇಳಿಸಿಕೊಂಡರೆ ಆಯಿತು. ದೇಹ ತಂಪಾಗುತ್ತದೆ. ಇಂದಿನ ದಿನಗಳಲ್ಲಿ ಜ್ವರ, ಶೀತ, ಕೆಮ್ಮು ಬಂದರೂ ಬಿಸಿ ನೀರನ್ನು ಕುಡಿಯುವ ಜನರೇ ಕಡಿಮೆ. ಹೆಚ್ಚು ಹೆಚ್ಚು ಜನರು ಕೋಲ್ಡ್ ಆಗಿರುವ ಫುಡ್ ಗಳನ್ನೇ ತಿನ್ನೋದು. ಅಂತಹವುದರಲ್ಲಿ ಈ ಹಿಂದಿನ ಕಾಲದ ಓಲ್ಡ್ ಫ್ಯಾಶನ್ ಮಣ್ಣಿನ ಹೂಜಿಯನ್ನು ಯಾರು ನೋಡಿರುತ್ತಾರೆ. ಯಾರು ಬಳಸುತ್ತಾರೆ ?

ಯಾವುದೇ ಕೋಲ್ಡ್ ಆಗಿರುವಂತಹ  ವಸ್ತುಗಳು ದೇಹಕ್ಕೆ ಸರಿ ಹೊಂದುವುದಿಲ್ಲ. ನಾವು ಅತಿ ತಂಪಾಗಿರುವ ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯ ಕೆಡುತ್ತದೆ. ಐಸ್ ಕ್ರೀಮ್ ಗಳು, ತಂಪು ಪದಾರ್ಥಗಳು ಸೇವಿಸುವುದರಿಂದ ಹೊಟ್ಟೆಯೊಳಗೆ ಸ್ಲಡ್ಜ್ ಉಂಟಾಗುತ್ತದೆ. ( ಸ್ಲಡ್ಜ್ ಅಂದರೆ ಅತ್ತ ದ್ರವವೂ ಅಲ್ಲದ ಇತ್ತ ಘನವು ಅಲ್ಲದ ಜಿಡ್ಡು ಜಿಡ್ಡಾಗಿ ಇರುವ ಪದಾರ್ಥ ). ಆಗ ತಿಂದ ಆಹಾರವು ಜೀರ್ಣವಾಗುವುದಿಲ್ಲ. ಈ ಸ್ಲಡ್ಜ್ , ಅನ್ನಾಂಗ ವ್ಯವಸ್ಥೆಯ ಭಾಗಗಳಾದ ದೊಡ್ಡ ಕರುಳು ಮತ್ತು ಸಣ್ಣ ಕರುಳಿನ ಮೂಲಕ ಪಾಸ್ ಆಗುವುದಿಲ್ಲ. ಆದ್ದರಿಂದ ಮಲಬದ್ಧತೆ ಉಂಟಾಗಬಹುದು. ಈ ಹೂಜಿಗೆ ನೀರನ್ನು ಹಾಕಿ ಕುಡಿಯುವುದರಿಂದ, ನೀರು ನಮ್ಮ ದೇಹಕ್ಕೆ ಅಗತ್ಯವಿರುವಷ್ಟು ಮಾತ್ರ ತಂಪನ್ನು ಉಂಟು ಮಾಡಿ, ಅತ್ತ ದೇಹವನ್ನು ತಣಿಸಿ ಇತ್ತ ಆರೋಗ್ಯವನ್ನು ಕೂಡಾ ಉಳಿಸುತ್ತದೆ.

ಪ್ರಕೃತಿ ಯಾವತ್ತೂ ಪ್ರಕೃತಿಯೇ. ಅದಕ್ಕೆ ಬದಲಿ ವ್ಯವಸ್ಥೆಯಿಲ್ಲ. ಪ್ರಕೃತಿಯ ಸ್ವಂತ ರಾ ಮೆಟೀರಿಯಲ್ ಆದ ಮಣ್ಣಿನಿಂದ ತಯಾರಿಸಿದ ಹೂಜಿಗಳು ಯಾವತ್ತಿಗೂ ಉತ್ಕೃಷ್ಟ ಫ್ರಿಡ್ಜ್ ಗಳು. ಅವು ಯಾವತ್ತೂ ಫ್ರೀಯಾನ್ ಗಳಂತಹ ಓಜೋನ್ ಅನ್ನು ತಿಂದು ಹಾಕುವ ಗ್ಯಾಸ್ ಅನ್ನು ಉತ್ಪತ್ತಿ ಮಾಡುವುದಿಲ್ಲ. ಹೂಜಿಗಳಿಗೆ ಸಾವಿರಾರು ರೂಪಾಯಿ ತೆರಬೇಕಾಗಿಲ್ಲ. ಒಂದಿಷ್ಟು ಆರೋಗ್ಯ ಪ್ರಜ್ಞೆ ಮತ್ತೊಂದಷ್ಟು ಪರಿಸರ ಕಾಳಜಿ ಜೊತೆಗಿಟ್ಟುಕೊಂಡು, ಕೆಲವೇ ನೂರು ರೂಪಾಯಿಗಳ ಬಜೆಟ್ಟಿನಲ್ಲಿ ಒಂದು ಜೀವಮಾನ ಕಾಲಕ್ಕೂ ಸಲ್ಲುವಂತಹ ಹೂಜಿಯನ್ನು ಕುಂಬಾರಣ್ಣ ನಮಗೆ ನೀಡುತ್ತಾನೆ. ಮತ್ತೆಲ್ಲಾದರೂ ಹೂಜಿ ಕಂಡರೆ ಅದರಲ್ಲಿ ಹೂಡಿಕೆ ಮಾಡಿ. ಇದು ಆರೋಗ್ಯದ ಮೇಲಿನ ಹೂಡಿಕೆ !

ರಸಿಕ ಕೆ. ಮುರುಳ್ಯ

ಪ್ರಥಮ ಪತ್ರಿಕೋದ್ಯಮ ವಿಭಾಗ,
ವಿವೇಕಾನಂದ ಕಾಲೇಜು ನೆಹರು ನಗರ ಪುತ್ತೂರು.

Leave A Reply

Your email address will not be published.