ಸುಬ್ರಹ್ಮಣ್ಯ | ಅಕ್ರಮ ಮರಳು ಸಾಗಾಟ | ವಾಹನ ಸಮೇತ ಪೊಲೀಸರಿಗೆ ಹಸ್ತಾಂತರಿಸಿದ ಡಿಸಿಐಬಿ

ಸುಳ್ಯ: ಲಾಕ್‌ಡೌನ್ ನಡುವೆಯೂ ಅಕ್ರಮವಾಗಿ ಟಿಪ್ಪರ್‌ನಲ್ಲಿ‌ ಮರಳು ಸಾಗಾಟ ಮಾಡುತ್ತಿರುವುಡು ಪತ್ತೆಯಾಗಿದೆ. ಕಳೆದ ಕೆಲವು ವಾರಗಳಿಂದ ಅವ್ಯಾಹತವಾಗಿ ಅಕ್ರಮ ಮರಳು ಸಾಗಾಟ ನಡೆದಿತ್ತು.

ಈ ಬಗ್ಗೆ ದೊರೆತ ಖಚಿತ ಸುಳಿವಿನ ಆಧಾರದ ಮೇಲೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದವರು ಪತ್ತೆಹಚ್ಚಿದ್ದಾರೆ.

ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ಪ್ರಕರಣವನ್ನು ಪತ್ತೆ ಹಚ್ಚಿರುವ ಜಿಲ್ಲಾ ಅಪರಾಧ ಪತ್ತೆದಳದವರು ವಾಹನ ಸಮೇತ ಸುಬ್ರಹ್ಮಣ್ಯ ಪೊಲೀಸರಿಗೆ ಶುಕ್ರವಾರ ಹಸ್ತಾಂತರಿಸಿದ್ದಾರೆ.

Leave A Reply

Your email address will not be published.