ದೇಶ ಲಾಕ್ ಡೌನ್ ನ ಚಿಂತೆಯಲ್ಲಿದ್ದರೆ, ಈತ ದನದ ಮಾಂಸ ಮಾರುತ್ತಿದ್ದಾನೆ | ನೆರಿಯದ ನಿಸಾರ್ ನನ್ನು ಕಳೆದ 15 ವರ್ಷಗಳಿಂದ ರಕ್ಷಿಸಿದ ಕೈಗಳು ಯಾರೂ ?

ಬೆಳ್ತಂಗಡಿ ತಾಲೂಕು ನೆರಿಯಾದಲ್ಲಿ ಅಕ್ರಮ ಕಸಾಯಿಖಾನೆಗೆ ದಾಳಿ ಪೊಲೀಸರು ದಾಳಿ ಇಟ್ಟಿದ್ದಾರೆ. ಆ ಸಂದರ್ಭ ಆರೋಪಿ ನಿಸಾರ್ ಓಡಿ ತಪ್ಪಿಸಿಕೊಂಡಿದ್ದಾನೆ.

ನೆರಿಯ ಗ್ರಾಮದ ಇಟ್ಟಾಡಿ ಎಂಬಲ್ಲಿ ಆರೋಪಿ ನಿಸಾರ್ ಎಂಬವನು ಅಕ್ರಮ ಗೋಮಾಳವೊಂದನ್ನು ನಡೆಸುತ್ತಿದ್ದನು. ಅಲ್ಲಿ ಆತ ಹಲವು ಊರುಗಳಿಂದ ಕದ್ದುಕೊಂಡು ಬಂದ ದನಗಳನ್ನು ಮೇಯಿಸಲು ಬಿಟ್ಟು ಮಾಂಸದ ಅಗತ್ಯ ಬಂದಾಗ ಅವುಗಳನ್ನು ಕೊಂದು ಮಾಂಸ ಮಾಡಿ ಮಾರುತ್ತಿದ್ದನು.

ಇವತ್ತು ಅಲ್ಲಿಗೆ ಪೊಲೀಸರು ದಾಳಿ ನಡೆಸಿದಾಗ, 15000 ರೂಪಾಯಿಯಷ್ಟರ ಮೌಲ್ಯದ ದನದ ಮಾಂಸ ಮತ್ತು ದನ ಕಡಿಯುವ ಕತ್ತಿ ಮತ್ತಿತರ ಸಲಕರಣೆಗಳು ಮತ್ತು ತೂಕದ ತಕ್ಕಡಿ ಮತ್ತು ಬಟ್ಟುಗಳು ದೊರೆತಿವೆ.

ಆತ ಇಲ್ಲಿ ಅಕ್ರಮ ಗೋಮಾಳವನ್ನು ನಡೆಸಿಕೊಂಡು ಮಾಂಸವನ್ನು ಮಾಡುತ್ತಿರಬೇಕಾದರೆ ಆತನ ಹಿಂದೆ ದೊಡ್ಡ ಗ್ಯಾಂಗ್ ಇರಲೇ ಬೇಕು. ಆತನ ಅಡ್ಡಿಗೆ ರೈಡ್ ಆಗುತ್ತಿರುವುದು ಇದು ಮೊದಲನೇ ಬಾರಿಯಲ್ಲ. ಕಳೆದ 15 ವರ್ಷಗಳಿಂದಲೂ ಆತ ತನ್ನ ಮನೆಯಲ್ಲೇ ಕಸಾಯಿಖಾನೆ ಮಾಡಿಕೊಂಡು ಬಂದಿದ್ದಾನೆ. ಒಂದು ಬಾರಿ ಪೊಲೀಸು ವಾಹನಕ್ಕೆ ಗುದ್ದಿ ಪರಾರಿಯಾಗಿದ್ದ. ಅಂದರೆ ಆತನ ಕೊಬ್ಬು ಎಷ್ಟಿರಬೇಡ ?
ಈ ಹಿಂದೆ ಆತನನ್ನು ಕೆಲವು ಬಾರಿ ಆರೆಸ್ಟ್ ಮಾಡಿದ್ದರೂ, ಅರೆಸ್ಟ್ ಆದ ಮರುದಿನ ಆತ ಹೊರಗೆ ಬರುತ್ತಿದ್ದ. ಆತನಿಗೆ ರಾಜಕಾರಣಿಗಳ ಮತ್ತು ಕೆಲವು ಅಧಿಕಾರಿಗಳ ನಂಟು ಇತ್ತು. ಈಗಲೂ ಇದೆ. ಇದೀಗ  ಆತನ ಹಿಂದೆ ಇರುವ ರಕ್ಷಕರು ಯಾರು ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ.

Leave A Reply