ಸುಳ್ಯ|ಎಸ್ ವೈ ಎಸ್ ಹಾಗೂ ಎಸ್ ಎಸ್ ಎಫ್ ಡಿವಿಜನ್ ವತಿಯಿಂದ ತರಕಾರಿ ವಿತರಣೆ

ಕರೋನವೈರಸ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಜನಸಾಮಾನ್ಯರು ಉದ್ಯೋಗ ಮಾಡಲು ಸಾಧ್ಯವಿಲ್ಲದೆ ಮನೆಯಲ್ಲಿಯೇ ಕುಳಿತು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿರುವ ಸುಳ್ಯ ಎಸ್ ವೈ ಎಸ್ ಮತ್ತು ಎಸ್ಎಸ್ಎಫ್ ಡಿವಿಜನ್ ವತಿಯಿಂದ ತಾಲೂಕಿನ ಅರ್ಹ ಬಡವರನ್ನು ಗುರುತಿಸಿ ಸುಮಾರು ಮುನ್ನೂರಕ್ಕೂ ಹೆಚ್ಚು ಕುಟುಂಬಗಳಿಗೆ ತರಕಾರಿ ಪದಾರ್ಥಗಳನ್ನು ಉಚಿತವಾಗಿ ವಿತರಣೆ ಮಾಡುವ ಕಾರ್ಯಕ್ರಮ ಏಪ್ರಿಲ್ 23ರಂದು ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಿವಿಜನ್ ಅಧ್ಯಕ್ಷ ಇಬ್ರಾಹಿಂ ಅಮ್ಜದಿ ಸುಳ್ಯ ಡಿವಿಜನ್ ವತಿಯಿಂದ ಹಾಗೂ ಸಂಘಟನೆಗಳ ವತಿಯಿಂದ ಸಹಾಯ ಹಸ್ತ ನೀಡುವ ಕಾರ್ಯಕ್ರಮಗಳು ನಡೆಯುತ್ತಿದ್ದು ರೋಗಿಗಳಿಗೆ ಔಷಧಿ ಉಪಚಾರಗಳನ್ನು ಮುಟ್ಟಿಸುವುದು, ಬಡವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡುವುದು, ತುರ್ತು ಪರಿಸ್ಥಿತಿಗಳಿಗೆ ರಕ್ತದಾನವನ್ನು ಮಾಡಿ ಸಹಕರಿಸುವುದು, ಅದೇ ರೀತಿ ದೂರದ ಊರಿಗೆ ಹೋಗಲು ಸಾಧ್ಯವಾಗದೆ ತೊಂದರೆಗೆ ಒಳಗಾಗಿರುವ ರೋಗಿಗಳನ್ನು ಮನೆಗೆ ಮುಟ್ಟಿಸುವ ಕಾರ್ಯಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸರ್ಕಾರವು ನೀಡಿರುವ ಎಲ್ಲ ಆದೇಶಗಳನ್ನು ಪಾಲಿಸುತ್ತಾ ಸಮಾಜಸೇವೆಗಾಗಿ ನಮ್ಮನ್ನು ಮುಡಿಪಾಗಿಟ್ಟಿರುತ್ತೇವೆ. ಇದಕ್ಕೆಲ್ಲ ಸ್ಪೂರ್ತಿ ನಮ್ಮೂರಿನ ದಾನಿಗಳ ಸಹಕಾರದಿಂದ ಮಾತ್ರವೇ ಸಾಧ್ಯವಾಗಿರುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿಯ ಸಮಾಜ ಸೇವೆಗೆ ನಮ್ಮ ಸಂಘಟನೆ ಸದಾ ಸಿದ್ಧವಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಂಘಟನೆಯ ಎಲ್ಲಾ ಪದಾಧಿಕಾರಿಗಳು,ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

ವರದಿ : ಹಸೈನಾರ್ ಜಯನಗರ

Leave A Reply

Your email address will not be published.