ಪೊಲೀಸರಿಗೆ ಲಾಠಿ,ರಿವಾಲ್ವರ್ ಕೊಟ್ಟಿರುವುದು ಕೇವಲ ಪ್ರದರ್ಶನಕ್ಕಲ್ಲ – ಕೋಟ ಶ್ರೀನಿವಾಸ ಪೂಜಾರಿ 

ಮಂಗಳೂರು ಎಪ್ರಿಲ್ 22: ಪೊಲೀಸರಿಗೆ ಲಾಠಿ, ರಿವಾಲ್ವರ್ ಕೊಟ್ಟಿರುವುದು ಕೇವಲ ಪ್ರದರ್ಶನಕ್ಕಲ್ಲ. ಆತ್ಮರಕ್ಷಣೆಗಾಗಿ ನಿಮ್ಮ ಮೇಲೆ ಹಲ್ಲೆಗೆ ಮುಂದಾದರೆ ಯಾರೂ ಕೂಡ ಹೆದರಬೇಕಾಗಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪೊಲೀಸರಿಗೆ ಅಭಯ ನೀಡಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾತನಾಡಿದ ಕೋಟಾ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರಾನಾ ನಿಯಂತ್ರಿಸಲು ನೂರಾರು ಮಂದಿ ಶ್ರಮಿಸುತ್ತಿದ್ದಾರೆ. ಕೊರೋನಾ ತಪಾಸಣೆಗೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ನೌಕರರು, ಪೊಲೀಸ್ ಇಲಾಖೆ, ಆರೋಗ್ಯಾಧಿಕಾರಿಗಳು ಹೋದಾಗ ಅವರ ತಂಟೆಗೆ ಯಾರಾದರೂ ಬಂದರೆ ಸುಮ್ಮನೇ ಕುಳಿತುಕೊಳ್ಳುವ ಮಾತೇ ಇಲ್ಲ, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

Leave A Reply

Your email address will not be published.