ಸುಳ್ಯ| ಸಂತ ಬ್ರಿಜಿದ್ ಚರ್ಚ್ ವತಿಯಿಂದ ಆಹಾರಧಾನ್ಯಗಳ ಕಿಟ್ ವಿತರಣೆ

ಸುಳ್ಯ ಸೆಂಟ್ ಬ್ರಿಜೆದ್ ಚರ್ಚ್ ನ ಎಲ್ಲಾ ಸಂಘ-ಸಂಸ್ಥೆಗಳ ವತಿಯಿಂದ ಚರ್ಚಿನ ಧರ್ಮಗುರುಗಳಾದ ರೆ.ಫಾದರ್ ವಿಕ್ಟರ್ ಡಿಸೋಜ ರವರ ನೇತೃತ್ವದಲ್ಲಿ ಅಹಾರಧಾನ್ಯಗಳ ಹಿಟ್ಟಅಹಾರಧಾನ್ಯಗಳ ಹಿಟ್ಟನ್ನು ಕಿಟ್ ನ್ನು ವಿತರಿಸಲಾಯಿತು.

ಕೋರೋಣ ಮಹಾಮಾರಿ ವೈರಸ್ಸಿನಿಂದ ಭಾರತದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು , ಜನಸಾಮಾನ್ಯರು ಉದ್ಯೋಗ ಮಾಡಲು ಸಾಧ್ಯವಿಲ್ಲದೆ ಮನೆಯಲ್ಲಿಯೇ ಉಳಿದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ಹಲವಾರು ಬಡ ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದು ಸುಳ್ಯ ಸೆಂಟ್ ಬ್ರಿಜೆದ್ ಚರ್ಚ್ ನ ಎಲ್ಲಾ ಸಂಘ-ಸಂಸ್ಥೆಗಳ ವತಿಯಿಂದ ಚರ್ಚಿನ ಧರ್ಮಗುರುಗಳಾದ ರೆ.ಫಾದರ್ ವಿಕ್ಟರ್ ಡಿಸೋಜ ರವರ ನೇತೃತ್ವದಲ್ಲಿ ಪ್ರಥಮ ಹಂತದಲ್ಲಿ ಸುಮಾರು 40 ಕಿಟ್ಟು ದ್ವಿತೀಯ ಹಂತದಲ್ಲಿ ಸುಮಾರು 56 ಅಗತ್ಯವಸ್ತುಗಳ ಆಹಾರಧಾನ್ಯಗಳ ಕಿಟ್ ಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಿ ಸಹಕರಿಸಿದರು.

ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಪ್ರಸನ್ನ ಪೀಟರ್ ಡಿಸೋಜ, ಜೂಲಿಯಾನಾ ಕ್ರಾಸ್ತ ಕಿಟ್ ತಯಾರಿಸಲು ಸಹಕರಿಸಿದರು.

ವರದಿ : ಹಸೈನಾರ್ ಜಯನಗರ

Leave A Reply

Your email address will not be published.