ಬಂಟ್ವಾಳ |ತೆಂಕಕಜೆಕಾರು ಜುಗಾರಿ ಅಡ್ಡೆಗೆ ದಾಳಿ 6 ಮಂದಿ ವಶಕ್ಕೆ
ಮಂಗಳೂರು: 19.04.2020 ರಂದು ಸುಮಾರು ಸಂಜೆ 4:30 ಗಂಟೆಗೆ ಪೊಲೀಸ್ ನಿರೀಕ್ಷಕರು,ಡಿಸಿಐಬಿ ರವರು ಬಂಟ್ವಾಳ ತಾಲೂಕು, ತೆಂಕಕಜೆಕಾರು ಗ್ರಾಮದ ಪೈರು ಎಂಬಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿರುವಲ್ಲಿಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಜುಗಾರಿ ಆಟವಾಡುತ್ತಿದ್ದ 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
1) ಬಂಟ್ವಾಳ ಉಳಿ ಗ್ರಾಮದ ನಿವಾಸಿ ಮಹಮ್ಮದ್ ಮುಸ್ತಾಫ @ ಮುನ್ನ, ಪ್ರಾಯ: 48 ವರ್ಷ,
2. ಬಂಟ್ವಾಳ ಮೂಡಪಡುಕೊಡಿ ಗ್ರಾಮದ ನಿವಾಸಿ ಹೈದರ್, ಪ್ರಾಯ: 37 ವರ್ಷ, .
3) ಬಂಟ್ವಾಳ ಕಾವಳಪಡೂರು ಗ್ರಾಮದ ನಿವಾಸಿ ಅಬ್ದುಲ್ ನವಾಝ್, ಪ್ರಾಯ: 40
4) ಬಂಟ್ವಾಳ ಬಡಗಕಜೆಕಾರು ಗ್ರಾಮದ ನಿವಾಸಿ ಜಾನ್ ಮೋರಾಸ್, ಪ್ರಾಯ: 44 ವರ್ಷ
5. ಬೆಳ್ತಂಗಡಿ ಸೋಣಂದೂರು ಗ್ರಾಮದ ನಿವಾಸಿ ಶಬೀರ್, ಪ್ರಾಯ: 26 ವರ್ಷ,
6. ಬೆಳ್ತಂಗಡಿ ಮಾಲಾಡಿ ಗ್ರಾಮದ ನಿವಾಸಿ ಲೋಕೇಶ್, ಪ್ರಾಯ: 48 ವರ್ಷ ಎಂಬವರುಗಳನ್ನು ವಶಕ್ಕೆ ಪಡೆದು ಆಟಕ್ಕೆ ಉಪಯೋಗಿಸಿದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಸ್ವಾಧೀನಪಡಿಸಿದ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 02,15,100/- ಆಗಬಹುದು. 7 ಜನ ಆರೋಪಿಗಳು ಓಡಿಹೋಗಿದ್ದು ಆರೋಪಿಗಳು ಪ್ರಸ್ತುತ ಕೋರೊನಾ ಸಾಂಕ್ರಾಮಿಕ ರೋಗ ಕೋವಿಡ್-19 ನ್ನು ತಡೆಗಟ್ಟುವ ಸಲುವಾಗಿ ಜಿಲ್ಲಾಡಳಿತವು ಜನ ಗುಂಪುಗೂಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದರೂ ಕೂಡಾ ನಿಷೇದಾಜ್ಞೆಯನ್ನು ಉಲ್ಲಂಘಿಸಿ ಗುಂಪುಗೂಡಿ ಆಟವಾಡಿದ್ದು ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಲಂ: 87 ಕೆ.ಪಿ ಆಕ್ಟ್ & 269, 270 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.