ಉಪ್ಪಿನಂಗಡಿಯ ವ್ಯಕ್ತಿಗೂ ವಕ್ಕರಿಸಿದ ಮಹಾಮಾರಿ ಕೊರೊನಾ !

ಪುತ್ತೂರು : ದ.ಕ.ಜಿಲ್ಲೆಯಲ್ಲಿ 12 ದಿನಗಳಿಂದ ಕೊರೊನಾ ಪಾಸಿಟಿವ್ ವರದಿಯಾಗಿಲ್ಲ ಎಂಬ ನೆಮ್ಮದಿಯ ನಡುವೆ ಇಂದು, ಶುಕ್ರವಾರ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಪುತ್ತೂರು ತಾಲೂಕಿನಲ್ಲಿ ದೃಢವಾಗಿದೆ.

ಇದೀಗ ಉಪ್ಪಿನಂಗಡಿಯ 39 ವರ್ಷ ವಯಸ್ಸಿನ ವ್ಯಕ್ತಿಯೋರ್ವರಿಗೆ ಕೋರೋನಾ ಪಾಸಿಟಿವ್ ಇರುವುದು ಖಚಿತವಾಗಿದೆ. ಮಾರ್ಚ್ 28 ಕ್ಕೆ ಈ ವ್ಯಕ್ತಿ ದೆಹಲಿಯಿಂದ ಹಿಂದಿರುಗಿದ್ದು, ಬರೋಬ್ಬರಿ 21 ದಿನಗಳ ನಂತರ ಆತನಿಗೆ ಪಾಸಿಟಿವ್ ಬಂದದ್ದು ಅಚ್ಚರಿ ಎನಿಸಿದೆ. ಈ ಮೊದಲು 14 ಗಳಲ್ಲಿ ಕೊರೋನ ಲಕ್ಷಣಗಳು ಗೋಚರಿಸುತ್ತವೆ ಅಂದುಕೊಂಡಿದ್ದರು. ನಂತರ ಕೆಲವು ರೋಗಿಗಳಲ್ಲಿ 21 ದಿನಗಳ ನಂತರ ಲಕ್ಷಣ ಗೋಚರಿಸಿದೆ.

ತಬ್ಳಿಖಿ ಪ್ರಕರಣ ನಡೆದ ನಂತರ ದೆಹಲಿಗೆ ಹೋಗಿ ಬಂದ ಎಲ್ಲಾ ವ್ಯಕ್ತಿಗಳ ಮಾಹಿತಿಯನ್ನೂ ಸರಕಾರವು ಕಲೆ ಹಾಕಿದಾಗ ಉಪ್ಪಿನಂಗಡಿಯ ವ್ಯಕ್ತಿಯೊಬ್ಬರು ದೆಹಲಿಗೆ ತೆರಳಿರುವುದು ಕಂಡುಬಂತು.

ಅವರು ದೆಹಲಿಗೆ ವಯಕ್ತಿಕ ಕೆಲಸಕ್ಕೆ ತೆರಳಿದ್ದಾನಾ ಅಥವಾ ತಬ್ಳಿಗಿಗೆ ಹೋಗಿದ್ದಾನೆಯಾ ಎಂಬ ಬಗ್ಗೆ ಇನ್ನೂ ಗೊಂದಲ ಇದೆ. ಒಟ್ಟಾರೆಯಾಗಿ ಈತ ದೆಹಲಿಯಿಂದ ಸಾವಿನ ಸ್ಯಾಂಪಲ್ ಹೊತ್ತುಕೊಂಡು ಬಂದಿದ್ದಾನೆ.

ಧಾರ್ಮಿಕವಾಗಿ ತುಂಬಾ ಆಕ್ಟಿವ್ ಆಗಿರುವ ಈ ವ್ಯಕ್ತಿ ವೃತ್ತಿಯಲ್ಲಿ ವಕೀಲರಾಗಿದ್ದು ತಬ್ಳಿಗಿ ಜಮಾತ್ ಗೆ ಹೋಗಿರುವ ಸಾಧ್ಯತೆಯೇ ಹೆಚ್ಚು.

ಸರಕಾರ ಈ ವ್ಯಕ್ತಿಯನ್ನು ಮುಂಜಾಗರುಕತೆಯಾಗಿ ಹೋಂ ಕ್ವಾರಂಟೈನ್ ನಲ್ಲಿ ಇರಿಸಿತ್ತು. ಇದೀಗ ಆ ವ್ಯಕ್ತಿಗೆ ಕೋರೋನಾ ಪಾಸಿಟಿವ್ ಬಂದಿರುವುದು ಜನರಲ್ಲಿ ಭೀತಿಯನ್ನು ಸೃಷ್ಟಿಸಿದೆ.

ಅಷ್ಟೇ ಅಲ್ಲದೆ ಈ ವ್ಯಕ್ತಿಯನ್ನು ಹೋಂ ಕ್ವಾರಂಟೈನ್ ಇರಿಸಲಾದ ಸಮಯದಲ್ಲಿ, ಆತ ಬೇರೆ ಜನರೊಂದಿಗೆ ನಿಯಮ ಮೀರಿ ಬೆರೆತಿದ್ದರೆ….. ಎಂಬ ಭಯ ಜನರನ್ನು ಕಾಡುತ್ತಿದೆ.

ಉಪ್ಪಿನಂಗಡಿ ಇನ್ನೇನು ಪೂರ್ತಿ ಸೀಲ್ ಡೌನ್ ಆಗಿ ಸ್ತಬ್ಧವಾಗಲಿದೆ. ಪೊಲೀಸರು ಉಪ್ಪಿನಂಗಡಿಯ ಸುತ್ತಮುತ್ತ ಸರ್ಪ ಕಾವಲು ಹಾಕಲಿದ್ದಾರೆ. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ಇಲಾಖಾ ಪ್ರಕಟಣೆ ಬರುವುದನ್ನು ನಿರೀಕ್ಷಿಸಲಾಗುತ್ತಿದೆ.

Comments are closed.