“ಓಟು ಬನ್ನಗ ಚೂರು ಗಮನಿಸಲೆ ” ಕೋರೋನಾ ಕಷ್ಟಕಾಲದಲ್ಲಿ ಜನರ ಸಹಾಯಕ್ಕೆ ಹೋದವರು ಓಟನ್ನು ‘ಅಡ್ವಾನ್ಸ್ ಬುಕ್ಕಿಂಗ್’ ಮಾಡಿದ ಪರಿ !

ಬೆಳ್ತಂಗಡಿಯ ಕಾಂಗ್ರೆಸ್ಸಿನ ಅಳಿದುಳಿದ ಪಳೆಯುಳಿಕೆಯಂತಹಾ ಮಾನವನ್ನು ಕೋರೋನಾ ಎಂಬ ರೋಗ ಬಂದು ತೊಳೆದು ಹಾಕಿದೆ.

ಮೊನ್ನೆ ಕಾಂಗ್ರೆಸ್ಸಿನ ಕೆಲವು ನಾಯಕರುಗಳು ಹಿಂದುಳಿದ ವರ್ಗದ ಕೆಲವು ಮನೆಗಳಿಗೆ ತೆರಳಿ ದಿನನಿತ್ಯದ ಅಗತ್ಯ ವಸ್ತುಗಳ ಹಂಚುವಿಕೆಯಲ್ಲಿ ತೊಡಗಿದ್ದರು.

ಹಾಗೆ ವಸ್ತುಗಳನ್ನು ಕೊಡುವಾಗ ನಡುವೆ ಒಂದು ಸಣ್ಣ ಭಾಷಣ. ಅದರಲ್ಲಿ ಆ ನಾಯಕ ಹೇಳುತ್ತಾರೆ ” ಇದು ಕಾಂಗ್ರೆಸ್ ಪಕ್ಷದ ಕಡೆಯಿಂದ.

ಇದು ವಸಂತ ಬಂಗೇರ ಅವರ ನೇತೃತ್ವದಲ್ಲಿ, ಹರೀಶ್ ಕುಮಾರ್ ಅವರ ಸಹಾಯದೊಂದಿಗೆ ” ನಿಮಗೆ ಕೊಡಮಾಡುತ್ತಿದ್ದೇವೆ. ನೀವು ಹಿಂದೆಯೂ ಕಾಂಗ್ರೆಸ್ ಪಕ್ಷದ ಜತೆ ಇದ್ದೀರಿ….”

ಹೀಗೆ ಭಾಷಣ ಸಾಗುತ್ತಿದ್ದಾಗ ಮದ್ಯದಲ್ಲಿದ್ದ ಇನ್ನೊಬ್ಬ ನಾಯಕ ” ಓಟು ಬನ್ನಗ ಚೂರು ಗಮನಿಸಲೆ ” ಅನ್ನುತ್ತಾನೆ !

” ಓಟು ಬನ್ನಗ ಚೂರು ಗಮನಿಸಲೆ ” ಇವತ್ತಿನ ಬೆಳ್ತಂಗಡಿಯ ವೈರಲ್ ಮ್ಯಾಟರ್. ಇನಿ ಒಲು ಪೊಂಡಲಾ ಒಂಜೇ ಪಾತೆರೊ ” ಓಟು ಬನ್ನಗ ಚೂರು ಗಮನಿಸಲೆ “!!

Comments are closed.