ದಿನಸಿ ಅಂಗಡಿಗಳಲ್ಲಿ ತರಾವರಿ ಬೆಲೆ | ಗ್ರಾಹಕ ಕಂಗಾಲು | ಏಕರೂಪದ ದರ ನಿಗದಿ ಮಾಡುವಂತೆ ಒತ್ತಾಯ

ದಕ್ಷಿಣ ಕನ್ನಡ : ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಸೀಮಿತ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಮಾಡಲಾಗಿದೆ.

ಇದರಿಂದ ಅಂಗಡಿಗಳಿಗೆ ಬರುವ ಗ್ರಾಹಕರಿಂದ ಬೇರೆ ಬೇರೆ ಅಂಗಡಿಗಳಲ್ಲಿ ತರಾವಳಿ ಬೆಲೆ ಪಡೆಯಲಾಗುತ್ತಿದ್ದು. ಈ ಕುರಿತು ಗ್ರಾಹಕರು ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದು, ಆದರೆ ಯಾವುದೇ ಕ್ರಮ ಇಲ್ಲ ಎನ್ನಲಾಗಿದೆ.

ಜಿಲ್ಲಾಡಳಿತದಿಂದ ಲಾಕ್‌ಡೌನ್ ಆರಂಭದಲ್ಲಿ ದರ ಪಟ್ಟಿ ಮಾಡಲಾಗಿದ್ದು, ಇದನ್ನು ಗ್ರಾಮೀಣ ಭಾಗದಲ್ಲಿ ಯಾರೂ ಫಾಲೋ ಮಾಡೊದಿಲ್ಲ‌.

” ಬೇಕಾದರೆ ವಸ್ತು ಪಡೆದುಕೊಳ್ಳಿ, ಇಲ್ಲಾಂದ್ರೆ ಬಿಡಿ. ಮಾ ಲ್ ನೆ ಸಿಗುವುದಿಲ್ಲ…” ಎಂಬ ಮಾತೂ ಹೇಳುತ್ತಾರೆ ಎಂದು ಗ್ರಾಹಕರು ತಿಳಿಸಿದ್ದಾರೆ. ಅಕ್ಕಿಯಿಂದ ಹಿಡಿದು ಎಲ್ಲಾ ವಸ್ತುವಿನ ಬೆಲೆಯನ್ನು ಕನಿಷ್ಠ ಹತ್ತು ಪರ್ಸೆಂಟ್ ಜಾಸ್ತಿಯಾಗಿದೆ. ಒಂದು ಅಂಗಡಿಯಲ್ಲಿ ಜಾಸ್ತಿ ಬೆಲೆ ಕೇಳಿದರೆ ಇನ್ನೊಂದು ಅಂಗಡಿ ಹುಡುಕಿಕೊಂಡು ಹೋಗಲು ಜನರಿಗೆ ಸಮಯವಿಲ್ಲ. ಸಾಮಾನು ಖರೀದಿ 12:00 ಒಳಗೆ ನಡೆಯಬೇಕು. ಪೊಲೀಸರು ಲಾಟಿ ಕುಟ್ಟುವ ಮೊದಲು ಜಾಗ ಖಾಲಿ ಮಾಡುವ ಉದ್ದೇಶದಿಂದ ಜನರು, ಅಂಗಡಿಯವರು ಹೇಳಿದ ದುಡ್ಡುಕೊಟ್ಟು ಬರುತ್ತಿದ್ದಾರೆ. ಎಲ್ಲಾ ಅಂಗಡಿಗಳಲ್ಲೂ ಒಂದೇ ರೀತಿಯ ಬೆಲೆ ನಿಗದಿ ಮಾಡುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ.

ನಾಗರಿಕ ಪೂರೈಕೆ ಇಲಾಖೆ ಮತ್ತು ಸ್ಥಳೀಯ ಇಲಾಖೆಗಳು ಕನಿಷ್ಠಪಕ್ಷ ಕೆಲವು ಕಡೆ ಯಲ್ಲಾದರೂ ರಿಯಾಲಿಟಿ ಚೆಕ್ ಮಾಡಬೇಕಿತ್ತು. ಅಥವಾ ಜನಪ್ರತಿನಿಧಿಗಳು ಸ್ವತಹ ತಮ್ಮ ಅನುಯಾಯಿಗಳ ಮತ್ತು ಪಕ್ಷದ ಕಾರ್ಯಕರ್ತರ ಮೂಲಕ ರಿಯಾಲಿಟಿ ಚೆಕ್ ಮಾಡಿಸಿ ಅನಗತ್ಯ ಬೆಲೆ ಸೇರಿಸುವುದನ್ನು ತಡೆಯಬೇಕಿತ್ತು. ಆದರೆ ಅಂತಹ ಯಾವುದೇ ಕಾರ್ಯಕ್ರಮ ನಡೆದಂತೆ ಕಾಣಿಸುತ್ತಿಲ್ಲ. ಕುರಿತು ಜಿಲ್ಲಾಡಳಿತ, ಉಪವಿಭಾಗಾಧಿಕಾರಿಗಳು ಗಮನಹರಿಸಬೇಕಿದೆ.

Comments are closed.