ತುಪ್ಪದ ಹುಡುಗಿ ರಾಗಿಣಿ ಸರಕಾರಿ ವೈದ್ಯರಿಗೆ ಕೈಯಡುಗೆಯ ರುಚಿ ತೋರಿಸಿದ್ದು

ಬೆಂಗಳೂರು : ಕೊರೋನಾ ವಿರುದ್ಧ ಹೋರಾಡುತ್ತಿರುವ ಸರಕಾರಿ ವೈದ್ಯರಿಗೆ ನಟಿ ರಾಗಿಣಿ ತಮ್ಮ ಮನೆಯಿಂದ ರುಚಿಕರವಾದ ಕೈಯಡುಗೆ ಮಾಡಿ ಉಣಬಡಿಸಿದ್ದಾರೆ.
ಕೊರೋನಾ ವೈರಸ್ ವಿರುದ್ಧ ಪೊಲೀಸ್, ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಮನೆಗೂ ಹೋಗದೆ ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದಾರೆ. ದಿನಪೂರ್ತಿ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳ ಸೇವೆ ಮಾಡುವ ವೈದ್ಯರಿಗಾಗಿ ರಾಗಿಣಿಯವರು ಸ್ವತಃ ಅಡುಗೆ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಜತೆಗೆ ಅವರ ಮನೆಯವರೂ ಕೂಡಾ ಅಡುಗೆಗೆ ಸಾಥ್ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಗಿಣಿ, ಆರ್.ಡಿ ಕಿಚ್ಚನ್ ವತಿಯಿಂದ ಆರೋಗ್ಯ ರಕ್ಷಣಾ ಹೀರೋಗಳಿಗೆ ಮನೆಯಲ್ಲೇ ಊಟ ತಯಾರಿಸಿ ನೀಡಲಾಗುತ್ತಿದೆ. ಈ ಮೂಲಕ 150 ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ರುಚಿಕರವಾದ ಊಟವನ್ನು ನಾವು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಅವರಿಗಾಗಿ ಸ್ವಲ್ಪ ಪ್ರೀತಿಯಿಂದ ಏನಾದರೂ ಮಾಡೋಣ ಎಂದು ಬರೆದುಕೊಂಡಿದ್ದಾರೆ.

ಕೆಲ ದಿನಗಳಿಂದ ಈ ರೀತಿಯ ಕೆಲಸಗಳನ್ನು ಮಾಡಿಕೊಂಡು ಬಂದಿರುವ ರಾಗಿಣಿ, ಇತ್ತೀಚೆಗಷ್ಟೇ ಯಲಹಂಕದ ಪೌರ ಕಾರ್ಮಿಕರೊಂದಿಗೆ ಚಾಯ್ ಪೇ ಚರ್ಚಾ ಮಾಡಿದ್ದರು. ಕಸ ಸ್ವಚ್ಛಗೊಳಿಸಲು ಹಾಗೂ ಗಾರ್ಬೇಜ್ ಅವರದು ಪ್ರತಿಫಲ ಬಯಸದೆ ಅದ್ಭುತ ಕಾರ್ಯ ಎಂದು ಹೊಗಳಿದ್ದರು.

ಎಲ್ಲಾ ವೈದ್ಯರಿಗೂ ರಾಗಿಣಿ ಉಣಬಡಿಸಿದ ರುಚಿಕರವಾದ ಊಟ ಇಷ್ಟವಾಗಿದೆ. ಆದರೂ ಎಲ್ಲರಿಂದಲೂ ಒಂದೇ ಕಂಪ್ಲೇಂಟು. ಎಲ್ಲರಿಗೂ ಗೊತ್ತಿರುವ ಹಾಗೆ, ರಾಗಿಣಿ ತುಪ್ಪದ ಹುಡುಗಿ. ಊಟವೇನೋ ಕಳಿಸಿದ್ದಾಳೆ : ಒಂದು ಚೊಂಬು ನಾಟಿ ಹಸುವಿನ ತುಪ್ಪ ಕಳಿಸಿದಿದ್ದರೆ ಏನು ಹೋಗುತ್ತಿತ್ತು ?!

Comments are closed.