ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ರಥೊತ್ಸವದ ದಿನವಾದ ಇಂದು 24 ಬಾರಿ ಪಂಚಾಕ್ಷರಿ ಜಪ ಜಪಿಸೋಣ

ಏಪ್ರಿಲ್ 17: ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ರಥೊತ್ಸವದ ದಿನವಾದ ಇಂದು, ಏಪ್ರಿಲ್ 17 ರಂದು ಲಕ್ಷಾಂತರ ಭಕ್ತಾದಿಗಳು ಭಾಗವಹಿಸಿ ಪುನೀತರಾಗುತ್ತಿದ್ದರು.

ಈ ವರ್ಷ ಕೊರೊನಾ ವೈರಸ್ ರೋಗದ ಕಾರಣ ದೇಶವೇ ಲಾಕ್ ಡೌನ್ ನಲ್ಲಿರುವ ಕಾರಣ ಸೀಮೆಯ ಭಕ್ತಾದಿಗಳು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಪ್ರಕಟಣೆಯಂತೆ ಅವರ ಅವರ ಮನೆಗಳಲ್ಲೇ 17 ರಂದು ಸಂಜೆ 7:30 ಘಂಟೆಗೆ ಸರಿಯಾಗಿ ದೀಪ ಹಚ್ಚಿ ‘ಓಂ ನಮಃ ಶಿವಾಯ’ ಪಂಚಾಕ್ಷರಿ ಜಪವನ್ನು 24 ಬಾರಿ ಜಪಿಸಿ ಕೃತಾರ್ಥರಾಗಬೇಕಾಗಿ ಹಾಗೂ ಸೀಮೆಯ ಎಲ್ಲರೂ ಸುಭಿಕ್ಷರಾಗಿರುವಂತೆ ಪ್ರಾರ್ಥಿಸಿಕೊಳ್ಳಬೇಕಾಗಿ ವಿನಂತಿಸುತ್ತಿದ್ದೇವೆ.

ಪ್ರಕಟಣೆ : ವಿಶ್ವ ಹಿಂದೂ ಪರಿಷತ್- ಬಜರಂಗದಳ, ಪುತ್ತೂರು.

Comments are closed.