ಲಾಕ್ಡೌನ್ ಮದ್ಯದಂಗಡಿ ಬಂದ್ | ಹೆಚ್ಚುತ್ತಿರುವ ಕಳ್ಳಭಟ್ಟಿ | ಪಡ್ನೂರಿನಲ್ಲಿ ಓರ್ವ ಬಂಧನ
ಪುತ್ತೂರು : ಲಾಕ್ಡೌನ್ ಹಿನ್ನೆಲೆಯಲ್ಲಿ ಮದ್ಯದಂಗಡಿ ಬಂದ್ ಆಗಿದೆ.ಹೀಗಾಗಿ ನಿತ್ಯ ಪಾನ ಪ್ರಿಯರು ಅದೇನೋ ಕಳೆದುಕೊಂಡಂತೆ ವರ್ತಿಸುತ್ತಿದ್ದಾರೆ.
ಎ.14 ರ ನಂತರ ಮದ್ಯದಂಗಡಿ ತೆರೆಯಬಹುದೆಂಬ ಆಶಾ ಭಾವನೆಯಿಂದ ಇದ್ದ ಪಾನಪ್ರಿಯರಿಗೆ ಕಠಿಣ ನಿಯಮಗಳೊಂದಿಗೆ ಲಾಕ್ಡೌನ್ ಮತ್ತೆ ಮುಂದುವರಿದಿರುವುದು ಮತ್ತಷ್ಟು ಕುಗ್ಗುವಂತೆ ಮಾಡಿದೆ ಎಂಬುದು ಪಾನಪ್ರಿಯರ ಒಡನಾಡಿಗಳ ಅಭಿಪ್ರಾಯ. ಹೀಗೆ ನಿತ್ಯ ಎಣ್ಣೆ ಹೊಡೆಯಿತ್ತಿರುವವರು ಪರ್ಯಾಯ ಮಾರ್ಗಗಳನ್ನು ಅನುಸರಿಸಲು, ಕಾನೂನು ಬಾಹಿರ ಕೆಲಸಗಳನ್ನು ಮಾಡಿ ಅಬಕಾರಿ ಇಲಾಖೆ ಹಾಗೂ ಪೊಲೀಸರ ಕೈಗೆ ಸಿಕ್ಕಿ ಬೀಳುವಂತಾಗುತ್ತದೆ.
ಹೇಗೂ ಈಗ ಗೇರು ಹಣ್ಣಿನ ಸೀಸನ್. ಸುಲಭದಲ್ಲಿ ತಮ್ಮ ಸುತ್ತಮುತ್ತಲಿನಲ್ಲೇ ಸಿಗುತ್ತದೆ. ಅದನ್ನೇ ಉಪಯೋಗಿಸಿ ಒಂದಷ್ಟು ದಿನ ದೊಂಡೆಯ ಪಸೆ ಉಳಿಸಿಕೊಳ್ಳಲು ಬಾಯಿ ಚಪ್ಪೆ ಚಪ್ಪೆ ಆಗುದನ್ನು ದೂರ ಮಾಡಲು ಪ್ರಯತ್ನಿಸಿ ಲಾಕ್ಡೌನ್ ಸಮಯದಲ್ಲೇ ಇಲಾಖೆಯ ಕೈಗೆ ಸಿಕ್ಕಿ ಲಾಕ್ ಆಗುತ್ತಿದ್ದಾರೆ.
ಗುರುವಾರ ಪುತ್ತೂರಿನ ಪಡ್ನೂರು ಗ್ರಾಮದ ಕುಂಬಾಡಿಯಲ್ಲಿ ಕಳ್ಳ ಬಟ್ಟಿ ತಯಾರಿಸಿದನ್ನು ಅಬಕಾರಿ ಪೊಲೀಸರು ಪತ್ತೆಮಾಡಿದ್ದಾರೆ. ಕುಂಬಾಡಿ ನಿವಾಸಿ ಮಂಜಪ್ಪ ಗೌಡ ಎಂಬವರು ಬಂಧಿತರಾಗಿದ್ದಾರೆ.
ಜಿಲ್ಲಾ ಅಬಕಾರಿ ಉಪ ಆಯುಕ್ತರ ನಿರ್ದೇಶನದಂತೆ ಪುತ್ತೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ಪುತ್ತೂರು ವಲಯ ಅಬಕಾರಿ ತಂಡ ದಾಳಿ ನಡೆಸಿ ಮೂರು ಬಾಟಲಿಗಳಲ್ಲಿ ತುಂಬಿಸಿಟ್ಟಿದ 5 ಲೀಟರ್ ಸಾರಾಯಿ, ಸುಮಾರು 50 ಲೀಟರ್ ಹುಳಿ ರಸ ಹಾಗೂ ಆರೋಪಿಯನ್ನು ಬಂದಿಸಿದ್ದಾರೆ.
ಕೆಲದಿನಗಳ ಹಿಂದೆ ಪುತ್ತೂರು ಹೊರವಲಯ ನರಿಮೊಗರಿನಲ್ಲೂ ದಾಳಿ ನಡೆಸಿ ಒಬ್ಬರ ಮೇಲೆ ಪ್ರಕರಣ ದಾಖಲಿಸಿದ್ದರು,ಬೆಳ್ಳಾರೆ ಯಲ್ಲೂ ಪ್ರಕರಣ ದಾಖಲಿಸಲಾಗಿದೆ, ಪಾಣಾಜೆ, ಪಡುವನ್ನೂರು ಗ್ರಾಮದ ಮಾಪಳದಲ್ಲೂ ಕಳ್ಳ ಬಟ್ಟಿ ತಯಾರಿಸುವುದನ್ನು ಪತ್ತೆ ಮಾಡಿದ್ದಾರೆ.
ಪ್ರಾಮಾಣಿಕತೆಯಿಂದ ದಿನಸಿ ಕಿಟ್ ನಲ್ಲಿ ಸಿಕ್ಕಿದ ಚಿನ್ನದ ಉಂಗುರ ಮರಳಿಸಿದ ಪುತ್ತೂರಿನ ಬಾಲಕ
Comments are closed.