ಮೈಕಾಲ್ತೋ ಬಿಸಯಾ | ಫೇಸ್ ಬುಕ್ ನಲ್ಲಿ ಮೋದಿ, ಅಮಿತ್ ಷಾ ಅವಹೇಳನ | 2 ಎರೆಸ್ಟ್
ಮಂಗಳೂರು: ಕೊರೋನಾ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರನ್ನು ಫೇಸ್ ಬುಕ್ ಪೇಜ್ ನಲ್ಲಿ ಅವಹೇಳನ ಮಾಡಿದ ತಂಡದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ಇಲ್ಯಾಸ್ ಪಣಕಜೆ ಮತ್ತು ಅಬ್ದುಲ್ ಬಶೀರ್ ಅಲಿಯಾಸ್ ನಿಸಾರ್ ಅಹಮದ್ ಕಬಕ ಉರಿಮಜಲು ಬಂಧಿತರು. ಈ ಇಬ್ಬರೂ ಕೊರೋನಾ ರೋಗ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.
ಮೈಕಾಲ್ತೊ ಬಿಸಯಾ ಎನ್ನುವ ಫೇಸ್ ಬುಕ್ ಪೇಜ್ ನಲ್ಲಿ ಇವರಿಬ್ಬರು ಮೋದಿ ಮತ್ತು ಶಾ ಅವರನ್ನು ಅವಹೇಳನಕಾರಿಯಾಗಿ ಬಿಂಬಿಸಿ ಪೋಸ್ಟ್ ಗಳನ್ನು ಹಾಕುತ್ತಿದ್ದರು. ನೀವೊಮ್ಮೆ ಅವರ ಫೇಸ್ ಬುಕ್ ನೋಡಿ, ನಿಮಗೇ ತಿಳಿಯುತ್ತದೆ ಅವರೆಂತವರೆಂದು. ಬರೀ ನಿಂದನೆ, ಅವಹೇಳನೆ. ಒಂದೇ ಒಂದು ಸ್ವಸ್ಥ ಮನಸ್ಸಿನ ಪೋಸ್ಟ್ ಇಲ್ಲ. ಇಷ್ಟು ದಿನ ಅವರನ್ನು ಪೊಲೀಸರು ಮತ್ತು ನಾಯಕರು ಹೇಗೆ ಸಹಿಸಿಕೊಂಡರು ಅನ್ನೋದೇ ವಿಶೇಷ. ಅಷ್ಟು ಕೆಟ್ಟದಾಗಿದೆ ಅವರ ಆಲೋಚನೆ.
ಇವರೊಂದಿಗೆ ಇನ್ನೂ ಅನೇಕರು ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕುರಿತು ಮಾಹಿತಿ ಲಭಿಸಿದ್ದು, ಅವರ ಪತ್ತೆಗೆ ಜಾಲ ಬೀಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಗೋ ರಕ್ಷಾ ಪ್ರಮುಖ ಪ್ರದೀಪ್ ಪಂಪ್ ವೆಲ್ ಅವರು ನೀಡಿದ ದೂರಿನ ಅನ್ವಯ FIR ದಾಖಲಿಸಲಾಗಿತ್ತು.
ಪೊಲೀಸರ ಬಗ್ಗೆ ಅವರು ಹಾಕಿದ್ದಾರೆ ಎನ್ನಲಾದ ಪೋಸ್ಟ್ ನೋಡಿ.
ಅಜೀಂ ಪ್ರೇಮ್ ಜಿ ಬಗ್ಗೆ ಬರೆದ ಸುಳ್ಳು ಸುದ್ದಿ. ಅಜೀಂ ಪ್ರೇಮ್ ಜಿ ಕೋರೋಣ ಫಂಡ್ ಗೆ 1000 ಕೋಟಿ ಕೊಟ್ಟಿದ್ದಾರೆ ಎಂದು ಬರೆದಿದೆ. ಅದು ಒಂದು ವರ್ಷದ ಹಳೆಯ ದಾನದ ಸುದ್ದಿ.
ಆರೋಪಿಗಳ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆ 1897, ಮಾಹಿತಿ ತಂತ್ರಜ್ಞಾನ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ 2005, ಐಪಿಸಿ ಸೆ. 188, 153, 505 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರು ಕಮಿಷನರ್ ಟ್ವೀಟ್
Comments are closed.