ಕೊಡಗು ಕೋರೋನ ಮುಕ್ತ ಜಿಲ್ಲೆ | ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ

ಏಪ್ರಿಲ್,15 : ಕೋರೋನ ಮುಕ್ತ ಜಿಲ್ಲೆಯಾಗಿದ್ದು ಇದಕ್ಕಾಗಿ ಕೊಡಗಿನ ಸರ್ವ ಜನತೆಗೆ ಜಿಲ್ಲಾಡಳಿತದ ಕಡೆಯಿಂದ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಧನ್ಯವಾದ ಅರ್ಪಿಸಿದ್ದಾರೆ.

ಕೊಡಗಿನ ಎಲ್ಲಾ 137 ಮಂದಿಯ ಪರೀಕ್ಷೆ ನೆಗೆಟಿವ್ ಆಗಿದ್ದು ಈ ಹಿಂದೆ Positive ಆಗಿದ್ದ ವ್ಯಕ್ತಿಯ ಸಂಪರ್ಕದಲ್ಲೂ ಯಾರಿಗೂ ಪಾಸಿಟಿವ್ ವರದಿ ಬಂದಿಲ್ಲದಿರುವುದು ಕೊಡಗಿನ ಜನರಲ್ಲಿ ಒಂದಷ್ಟು ನಿರಾಳತೆ ಮೂಡಿಸಿದೆ.

ಹೀಗಿದ್ದರೂ ಕೊಡಗು ಜಿಲ್ಲೆಯಲ್ಲಿ ಎಲ್ಲಾ ರೀತಿಯ ಜಾಗೃತಿ ಕ್ರಮ ಕೈಗೊಳ್ಳಲಾಗಿದೆ. COVID ಆಸ್ಪತ್ರೆ
ಸಿದ್ಧಗೊಂಡಿದೆ. ಯಾವುದೇ ಕಾರ್ಯಕ್ಕೆ ಹಣದ ಕೊರತೆ ಇಲ್ಲ. ಎಲ್ಲಾ ವ್ಯವಸ್ಥೆ ಕೈಗೊಂಡಿದ್ದೇವೆ.
ಕೊಡಗು ಮೆಡಿಕಲ್ ಕಾಲೇಜ್ ಗೆ ಸುಳ್ಯದಿಂದ 6 ಜನ ವೈದ್ಯರು ನಿಯೋಜಿತರಾಗಿದ್ದಾರೆ.

ಆರೋಗ್ಯ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಕೊಡಗಿನಲ್ಲಿ 2 ಕೋಟಿ ವೆಚ್ಚದಲ್ಲಿ ಮೇ ಅಂತ್ಯದಲ್ಲಿ ಪ್ರಯೋಗಾಲಯ ಆರಂಭ ಆಗಲಿದೆ ಎಂದವರು ಹೇಳಿದರು.

ಇನ್ನೂ ಮುಂದೆ ಸಂಶಯಾಸ್ಪದ ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಪೊಲೀಸ್ ಸಹಕಾರದೊಂದಿಗೆ ಗ್ರಾಮೀಣ ಮಟ್ಟದಲ್ಲಿ ತಪಾಸಣೆ ನಡೆಸಲಿದ್ದಾರೆ.
ಅಗತ್ಯ ಇದ್ದವರಿಗೆ ತಪಾಸಣೆ ಮಾಡಲಾಗುತ್ತದೆ.
ಜಿಲ್ಲೆಯಲ್ಲಿ 250 ಜನರಿಗೆ ತಪಾಸಣೆ ಮಾಡಿ ಸಂಪರ್ಕ ತಡೆ ಮಾಡಲಾಗುತ್ತದೆ.

ಖಾಸಗಿ ಕ್ಲಿನಿಕ್ ಗಳಲ್ಲಿ ಸೋಂಕು ಶಂಕಿತ ವ್ಯಕ್ತಿಗಳು ಬಂದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲು ಸೂಚಿಸಲಾಗಿದೆ.

ಮೆಡಿಕಲ್ ಶಾಪ್ ನಲ್ಲಿ ಔಷಧಿಗಳನ್ನು ವೈದ್ಯರ ಚೀಟಿ ಇಲ್ಲದೆ ಕಡ್ಡಾಯವಾಗಿ ನೀಡಬಾರದು ಎಂದು ಆದೇಶ ನೀಡಲಾಗಿದೆ. ನಾಳೆಯಿಂದ 65 ವರ್ಷ ಆದವರಿಗೆ ಮನೆಯಲ್ಲಿ ವಿಶೇಷ ಜಾಗ ನೀಡಬೇಕು ಎಂಬ ಸಂದೇಶದ ಆಂದೋಲನ ಆರಂಭ ಮಾಡಲಾಗುತ್ತದೆ.
ಪ್ರತೀ ಪಂಚಾಯತ್ ಮಟ್ಟದಲ್ಲಿ ಈ ಸಂದೇಶ ಜಾಗೃತಿ ನಡೆಯಲಿದೆ. ಹೊರಗೆ ಹೋಗುವಾಗ ಸೂಕ್ತ ಮಾಸ್ಕ್ ಹಾಕಿಕೊಂಡು ಹೋಗಬೇಕು. ಏಪ್ರಿಲ್ 20 ರವರಿಗೆ ಇದೆ ರೀತಿ ನಿಯಮ ಮುಂದುವರಿಯಲಿದೆ. ಪಡಿತರ ವಿತರಣೆ ಶೇಕಡಾ 85 ಭಾಗ ಮುಗಿದಿದ್ದು ಇನ್ನುಳಿದ 15% ಭಾಗದ 4000 ಜನ ವಲಸಿಗರಿಗೆ ಪಡಿತರ ನೀಡಲಾಗಿದೆ. ಮೇ 3 ರವರೆಗೆ ಮತ್ತೊಂದು ಸುತ್ತಿನಲ್ಲಿ  ಪಡಿತರ ನೀಡಲಾಗುತ್ತದೆ.

ಕೊಡಗನ್ನು ಇದೇ ರೀತಿ ಕಾಪಾಡಲು ಎಲ್ಲರೂ ಸಹಕರಿಸಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

Comments are closed.