ಸಂಪಾಜೆ | ಕಾರಿನಲ್ಲಿ ದನದ ಮಾಂಸ ಪತ್ತೆ | ದೇಶಕ್ಕೆ ಕೋರೋನಾದ ಚಿಂತೆ, ದುಷ್ಕರ್ಮಿಗಳಿಗೆ ದನದ ಮಾಂಸದ್ದೇ ಚಿಂತೆ

ಕಾರಿನಲ್ಲಿ ದನದ ಮಾಂಸ ಸಾಗಿಸಲಾಗುತ್ತಿದೆ ಎಂಬ‌ ಖಚಿತ ಮಾಹಿತಿ ಮೇರೆಗೆ ದೇವರಕೊಲ್ಲಿ ಎಂಬಲ್ಲಿ ಕಾರನ್ನು ತಡೆದ ಪೊಲೀಸರಿಗೆ ದನದ ಮಾಂಸ ಸಿಕ್ಕಿದೆ. ಈ ವೇಳೆ ಕಾರಿನಲ್ಲಿದ್ದವರು ಓಡಿ ಹೋಗಿದ್ದಾರೆ.

ಕೊಯನಾಡಿನ ಕಲ್ಲಾಳದಿಂದ ದೇವರಕೊಲ್ಲಿಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದ ಸಂಪಾಜೆ ಆರಕ್ಷಕ ಠಾಣಾ ಸಿಬ್ಬಂದಿಗಳಿಗೆ ಬಂದಿತ್ತು. ದೇವರಕೊಲ್ಲಿಯಲ್ಲಿ ಪೊಲೀಸರು ವಾಹನ ತಡೆದು ವಾಹನ ತಪಾಸಣೆ ಮಾಡಿದಾಗ ಕಾರಿನಲ್ಲಿ ದನದ ಮಾಂಸ ಇತ್ತೆನ್ನಲಾಗಿದೆ. ಈ ವೇಳೆ ಕಾರಲ್ಲಿದ್ದ ಆರೋಪಿಗಳು ತಪ್ಪಿಸಿಕೊಂಡರೆಂದು ಹೇಳಲಾಗಿದ್ದು ಆರೋಪಿಗಳನ್ನು ಬಂಧಿಸುವಂತೆ ಹಿಂದೂ ಜಾಗರಣ ವೇದಿಕೆ ಹಾಗೂ ಭಜರಂಗದಳ ಕಾರ್ಯಕರ್ತರು ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.

ಪ್ರತಿ ಬಾರಿಯೂ ಅದು ಹೇಗೆ ಕಾರಿನಲ್ಲಿದ್ದ ವ್ಯಕ್ತಿಗಳು ಓಡಿಹೋಗುತ್ತಾರೆ ಎಂಬುದು ಪ್ರಶ್ನೆಯಾಗಿದೆ.

Leave A Reply

Your email address will not be published.