ಪುತ್ತೂರು | ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನಿಂದ ಕಲಾವಿದರಿಗೆ ಕಿಟ್ ವಿತರಣೆ

ದೇಶವ್ಯಾಪಿ ಕೊರೋನಾ ವೈರಸ್ ಪ್ರಯುಕ್ತ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ವತಿಯಿಂದ ಪುತ್ತೂರು ಪರಿಸರದ ಅಗತ್ಯ ಇರುವ ಯಕ್ಷಗಾನ ಕಲಾವಿದರಿಗೆ ಒಂದು ತಿಂಗಳ ಬಳಕೆಗೆ ಬೇಕಾಗುವ ದಿನಸಿ ಸಾಮಗ್ರಿಗಳ ಕಿಟ್ ನ್ನು ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಮೂಲಕ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪುತ್ತೂರು ಘಟಕದ ಗೌರವಧ್ಯಕ್ಷ ಕೆ. ಸೀತಾರಾಮ ರೈ ಸವಣೂರು , ಅಧ್ಯಕ್ಷ ಜೈರಾಜ್ ಭಂಡಾರಿ ನೋಣಾಲು, ಪದಾಧಿಕಾರಿಯಾದ ಚಂದ್ರಹಾಸ ರೈ ಮತ್ತು ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಪ್ರಭಂದಕ ವಸಂತ್ ಜಾಲಾಡಿ ಯವರು ಉಪಸ್ಥಿತರಿದ್ದರು.

Leave A Reply

Your email address will not be published.