ಪಾಣಾಜೆ | ವಿದ್ಯಾಶ್ರೀ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದಿನಸಿ ಸಾಮಾಗ್ರಿ ಕಿಟ್ ವಿತರಣೆ

ಕೊರೊನಾ ವೈರಸ್ ತಡೆಗಟ್ಟಲು ವಿದಿಸಿದ ಲಾಕ್ ಡೌನ್ ನಿಂದ ತೀರಾ ಸಂಕಷ್ಟದಲ್ಲಿರುವ ಕೆಲವು ಬಡ ಕುಟುಂಬಕ್ಕೆ ವಿದ್ಯಾಶ್ರೀ ಫ್ರೆಂಡ್ಸ್‌ ಚಾರಿಟೇಬಲ್ ಟ್ರಸ್ಟ್ ಆರ್ಲಪದವು ಪಾಣಾಜೆ ಇದರ ವತಿಯಿಂದ ದಿನ ಬಳಕೆ ಸಾಮಾಗ್ರಿಗಳನ್ನೊಳಗೊಂಡ ಕಿಟ್ ಗಳನ್ನು ಏ.10ರಂದು ವಿತರಣೆ ಮಾಡಲಾಯಿತು.

ಊರ ದಾನಿಗಳ ಸಹಕಾರದೊಂದಿಗೆ ಶ್ರೀಹರಿ ಪಾಣಾಜೆ ಹಾಗೂ ಟ್ರಸ್ಟ್ ಅಧ್ಯಕ್ಷ ಚಂದ್ರ ಎ.ಬಿ ರವರ ನೇತೃತ್ವದಲ್ಲಿ ಬಡ ಕುಟುಂಬಗಳನ್ನು ಸಂಪರ್ಕಿಸಿ ಅವರ ಮನೆಗಳಿಗೆ ತಲುಪಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟ್ ಸಂಚಾಲಕರಾದ ಶ್ರೀಪ್ರಸಾದ್ ಪಾಣಾಜೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕುಲಾಲ್, ಕಾರ್ಯದರ್ಶಿ ಧನಂಜಯ ಯಾದವ್, ಕೋಶಾಧಿಕಾರಿ ಪ್ರಸಾದ್ ಮಣಿಯಾಣಿ ಸದಸ್ಯರಾದ ಹರಿಪ್ರಸಾದ್ ಕೊಂದಲಡ್ಕ,ಕೃಷ್ಣಪ್ಪ ಪೂಜಾರಿ, ಚಿದಾನಂದ ಮಣಿಯಾಣಿ,ಶರತ್ ಪೂಜಾರಿ, ಅನಿಲ್ ಡಿ ಸೋಜಾ, ಚಂದ್ರ ತೂಂಬಡ್ಕ, ಬಿ.ಕೆ ಮೋಹನ್ ಹಾಗೂ ವಿದ್ಯಾಶ್ರೀ ಯುವಕ ಮಂಡಲದ ಅದ್ಯಕ್ಷರಾದ ದಿನೇಶ್ ಯಾದವ್ ಉಪಸ್ಥಿತರಿದ್ದರು.

Leave A Reply

Your email address will not be published.