ಕರಾಯದ ಕೋರೋನಾ ಸೋಂಕಿತ ಗುಣಮುಖ | ವೆನ್ಲಾಕ್ ಆಸ್ಪತ್ರೆಯಿಂದ ಇಂದು ಬಿಡುಗಡೆ
ಬೆಳ್ತಂಗಡಿ ತಾಲೂಕು ತನ್ನಿರುಪಂತ ಗ್ರಾಮದ ಕರಾಯದ ಜನತಾ ಕಾಲೋನಿಯ ಕೋರೋನಾ ಸೋಂಕಿತ ವ್ಯಕ್ತಿಯ ವೈದ್ಯಕೀಯ ಪರೀಕ್ಷೆಯ ರಿಪೋರ್ಟ್ ಈಗ ಬಂದಿದ್ದು ಅದು ನೆಗೆಟಿವ್ ಎಂದಿದೆ. ಅಂದರೆ ವ್ಯಕ್ತಿಯು ಕೋರೋಣ ರೋಗದಿಂದ ಗುಣಮುಖರಾಗಿದ್ದಾನೆ ಎನ್ನಬಹುದು.
ಈ ಮೂಲಕ ಬಿಗುವಿನ ವಾತಾವರಣ ಇದ್ದ ಕರಾಯ ಸುತ್ತಮುತ್ತ ಒಂದಷ್ಟು ರಿಲೀಫ್ ಗೋಚರಿಸಿದೆ. ಈ ವ್ಯಕ್ತಿಯು ಕಳೆದ ಮಾರ್ಚ್ 21ರಂದು ದುಬೈನಿಂದ ಬಂದಿದ್ದು ಮಾರ್ಚ್ 24ರಂದು ಈತನಿಗೆ ರೋಗಲಕ್ಷಣಗಳು ಕಾಣಿಸಿಕೊಂಡಿದ್ದವು. ಆಗ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಆತನು ಕೋರೋನಾ ಪಾಸಿಟಿವ್ ಆಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆತನಿಗೆ ನೀಡಿದ ಚಿಕಿತ್ಸೆಯು ಫಲಿಸಿದ್ದು ಇದೀಗ ಆತನ ರಿಪೋರ್ಟ್ ನೆಗೆಟಿವ್ ಎಂದು ಬಂದಿದೆ. ಆದುದರಿಂದ ಆತ ಇಂದು ಶುಕ್ರವಾರ ಬಿಡುಗಡೆಗೊಂಡು ಮನೆಗೆ ಮರಳುತ್ತಾರೆ. ಆದರೂ ಕಡ್ಡಾಯವಾಗಿ ಆತ ಏಪ್ರಿಲ್ ಮೂವತ್ತರವರೆಗೆ ಹೋಂ ಕ್ವಾರಂಟೈನ್ ಆಗಿರಬೇಕು. ಮತ್ತು ಸ್ಥಳೀಯ ಪೊಲೀಸರ ಮತ್ತು ವೈದ್ಯಕೀಯ ತಂಡದ ಮೇಲುಸ್ತುವಾರಿಯಲ್ಲಿ ಇರಬೇಕು. ಏಪ್ರಿಲ್ 30 ರ ನಂತರ ಆತನ ಗಂಟಲ ದ್ರವದ ಮಾದರಿಯನ್ನು ಪರಿಶೀಲಿಸಿ ಅಲ್ಲಿಯೂ ನೆಗೆಟಿವ್ ಬಂದರೆ ಆತನನ್ನು ಕೊನೆಯದಾಗಿ ಕೋರೋನಾ ಮುಕ್ತ ವ್ಯಕ್ತಿ ಎಂದು ಘೋಷಿಸಲಾಗುತ್ತದೆ.
ಉಳಿದಂತೆ ಕೋರೋನಾ ಕಾರಣದಿಂದ ಹೋಂ ಕ್ವಾರಂಟೇನು ಮಾಡಲ್ಪಟ್ಟ 45 ಜನರ ಗಂಟಲ ದ್ರವ ಮಾದರಿಗಳನ್ನು ನಿನ್ನೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು ಇನ್ನೆರಡು ದಿನಗಳಲ್ಲಿ ಅವುಗಳ ರಿಪೋರ್ಟ್ ಕೈಸೇರಲಿದೆ. ಅವುಗಳ ಫಲಿತಾಂಶಕ್ಕಾಗಿ ಜಿಲ್ಲಾಡಳಿತ ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ. ಆ ರಿಪೋರ್ಟ್ ಗಳು ಏನಾದರೂ ನೆಗೆಟಿವ್ ಬಂದುಬಿಟ್ಟರೆ ನಾವು ಮೊದಲ ಹಂತದ ಯುದ್ಧ ಗೆದ್ದಂತೆಯೇ.