ಸವಣೂರು ಪದ್ಮಪ್ರಿಯ ಕಾಂಪ್ಲೆಕ್ಸ್‌ನ ಒಂದು ತಿಂಗಳ ಬಾಡಿಗೆ ಪಿಎಂ ಕೇರ್‌ಗೆ

ಸವಣೂರು: ವಿಶ್ವದಾದ್ಯಂತ ಕೊರೊನಾ ಕರಿ ಛಾಯೆಯಿಂದಾಗಿ ಅಕ್ಷರಶಃ ನಲುಗಿ ಹೋಗಿದೆ.ಭಾರತದಲ್ಲೂ ಕೊರೊನಾ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಮಾರೋಪಾದಿ ಕಾರ್ಯ ನಡೆಯುತ್ತಿದೆ.

ಈ ಮದ್ಯೆ ಸೂಕ್ತ ವ್ಯವಸ್ಥೆಗಳಿಗೆ ಆರ್ಥಿಕ ನೆರವನ್ನು ಸರಕಾರ ಯಾಚಿಸಿದೆ.

ಈಗಾಗಲೇ ಉದ್ಯಮಿಗಳಿಂದ ಹಿಡಿದು ಸಾಮಾನ್ಯ ಜನತೆ ಪ್ರಧಾನಿ ಪರಿಹಾರ ನಿಧಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿದ್ದಾರೆ.

ಇದೇ ರೀತಿಯಲ್ಲಿ ದ.ಕ.ದ ಪುತ್ತೂರು ತಾಲೂಕಿನ ಸವಣೂರು ವಿಷ್ಣುಪುರ ಎಂಬಲ್ಲಿರುವ ಪದ್ಮಪ್ರಿಯ ಕಾಂಪ್ಲೆಕ್ಸ್ ನ ಒಂದು ತಿಂಗಳ ಬಾಡಿಗೆಯನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ನೀಡುವುದಾಗಿ ಕಾಂಪ್ಲೆಕ್ಸ್ ಮಾಲಕ ಪಾಲ್ತಾಡಿ ಗ್ರಾಮದ ಅಂಗಡಿಮೂಲೆ ನಿವಾಸಿ ಪುಟ್ಟಣ್ಣ ಗೌಡ ತಿಳಿಸಿದ್ದಾರೆ.

Leave A Reply

Your email address will not be published.