ಶಾಸಕ ಹರೀಶ್ ಪೂಂಜಾ ಅವರಿಂದ ಆಶಾ ಕಾರ್ಯಕರ್ತರಿಗೆ ಮತ್ತು ತಾಲೂಕು ಆಸ್ಪತ್ರೆ ಡಿ ಗ್ರೂಪ್ ನೌಕರರಿಗೆ ಆಹಾರ ಸಾಮಗ್ರಿಗಳ ವಿತರಣೆ

ಬೆಳ್ತಂಗಡಿ : ಕೊರೊನಾ ವೈರಸ್ ಹಿನ್ನಲೆ ಜನರಲ್ಲಿ ಮುಂಜಾಗ್ರತೆ ಕ್ರಮದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವ ತಳಮಟ್ಟದ ಕಾರ್ಯಕರ್ತರೆಂದರೆ ಅದು ಆಶಾ ಕಾರ್ಯಕರ್ತರು ಮತ್ತು ಡಿ ಗ್ರೂಪ್ ನೌಕರರು. ಅವರು ನೇರವಾಗಿ ಶಂಕಿತ ಮತ್ತು ಸೊಂಕಿತರೊಂಡಿಗೆ ಮತ್ತು ಸೋಂಕಿತ ಇರಬಹುದಾದ ಹೋಂ ಕ್ವಾರಂಟೈನ್ ವ್ಯಕ್ತಿಗಳೊಂದಿಗೆ ಸಂಪರ್ಕಕ್ಕೆ ಬರುವವರು. ಇಂತಹ ಪ್ರಮುಖ ಕಾರ್ಯಕರ್ತರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.

ಇಂದು ಏಪ್ರಿಲ್ 10 ರಂದು ಆರೋಗ್ಯ ಅಧಿಕಾರಿಗಳ ಕಚೇರಿ ಎದುರು ಶಾಸಕ ಹರೀಶ್ ಪೂಂಜರವರು, ಒಟ್ಟು 247 ಸಾವಿರ ಕಾರ್ಯಕರ್ತೆಯರಿಗೆ ಮತ್ತು 15 ಜನ ಡಿ ಗ್ರೂಪ್ ನೌಕರರಿಗೆ ಆಹಾರ ಸಾಮಗ್ರಿಗಳ ಕಿಟ್ ಅನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿದ್ಯಾವತಿ, ಆರೋಗ್ಯಾಧಿಕಾರಿ ಕಚೇರಿಯ ಸಿಬ್ಬಂದಿ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.