ಪೌರ ಕಾರ್ಮಿಕ ಮಹಿಳೆ ಗೈರಾದದಕ್ಕೆ ಮನೆ ಮುಂದಿನ ರಸ್ತೆಯಲ್ಲಿ ಕಸ ಗುಡಿಸಿದ ಸಚಿವ ಸಚಿವ ಸಿಂಪಲ್ ಸುರೇಶ್ ಕುಮಾರ್

ಬೆಂಗಳೂರು : ತಮ್ಮ ಮನೆಯಿರುವ ಬೀದಿಗೆ ಬರುವ ಪೌರ ಕಾರ್ಮಿಕೆ ಲಿಂಗಮ್ಮ ಅವರ ಆರೋಗ್ಯ ಸರಿ  ರಸ್ತೆಯ ಕಸ ಗುಡಿಸಲು ಅವರು ಬಂದಿರಲಿಲ್ಲ. ಲಿಂಗಮ್ಮನ ಅನುಪಸ್ಥಿತಿಯಲ್ಲಿ ಸಚಿವ ಸುರೇಶ್ ಕುಮಾರ್ ತಮ್ಮ ಮನೆಯ ಮಂದಿನ ರಸ್ತೆಯ ಕಸವನ್ನು ಗುಡಿಸಿದ್ದಾರೆ.

ತಮ್ಮ ಮನೆಯ ಮುಂದಿನ ರಸ್ತೆಯ ಕಸ ಗುಡಿಸಲು ಬರುವ ಪೌರ ಕಾರ್ಮಿಕ ಮಹಿಳೆ ಲಿಂಗಮ್ಮ ಅವರ ಕಾಲಿಗೆ ಪೆಟ್ಟಾಗಿತ್ತು. ಹೀಗಾಗಿ ಇಂದು ಗಂಗಮ್ಮನವರು ಕೆಲಸಕ್ಕೆ ಗೈರಾಗಿದ್ದರು. ರಸ್ತೆಯಲ್ಲಿ ಕಸ ಮತ್ತು ಮರದ ಎಲೆಗಳು ಬಿದ್ದಿದ್ದವು. ಇದನ್ನು ಗಮನಿಸಿದ ಸಚಿವರು ಪತ್ನಿ ಜೊತೆ ಸೇರಿ ಮನೆಯೆದುರಿನ ರಸ್ತೆಯ ಕಸವನ್ನು ಗುಡಿಸಿದ್ದಾರೆ.

ಈ ವಿಷಯವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿರುವ ಸಚಿವರು, ಇಂದು ಬೆಳಗ್ಗೆ ವಾಕಿಂಗ್ ಕಡಿಮೆ ಮಾಡಿ ನಮ್ಮ ಮನೆಯ ಮುಂದಿನ ಅರ್ಧ ರಸ್ತೆಯನ್ನು ನನ್ನ ಪತ್ನಿ ಜೊತೆಗೂಡಿ ಗುಡಿಸಿದಾಗ ವ್ಯಾಯಾಮವೂ ಆಯಿತು ಮತ್ತು ಆನಂದ ಎರಡರ ಲಾಭವೂ ಆಯಿತು. ನಮ್ಮ ರಸ್ತೆಯ ಪೌರ ಕಾರ್ಮಿಕೆ ಲಿಂಗಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡದ್ದನ್ನು ಕೇಳಿ ಈ ಕೆಲಸಕ್ಕೆ ಇಳಿದೆ. ಆಕೆಯ ಭಾರ ಸ್ವಲ್ಪವಾದರೂ ಕಡಿಮೆಯಾಗಲಿ ಎಂಬ ಉದ್ದೇಶದಿಂದ ಕಸ ಗುಡಿಸಿದೆ. ನಾವೆಲ್ಲರೂ ಆಗಾಗ ಈ ಕೆಲಸ ಮಾಡಬಹುದಲ್ಲವೇ? ಸ್ವಚ್ಛತೆ ಕೇವಲ ಒಂದು ಕಾರ್ಯಕ್ರಮವಾಗುವುದರ ಜೊತೆಗೆ ಕಾರ್ಯವೂ ಆದರೆ ಉತ್ತಮ ಎಂದಿದ್ದಾರೆ.

Leave A Reply

Your email address will not be published.