ರಾಜ್ಯದ 31ಲಕ್ಷ ಉಜ್ವಲ ಯೋಜನೆಯ ಗ್ರಾಹಕರಿಗೆ ಮುಂಗಡ ಹಣ ಪಾವತಿ- ನಳಿನ್ ಕುಮಾರ್

ಮಂಗಳೂರು: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಅನ್ವಯ, ರಾಜ್ಯದ 31 ಲಕ್ಷ ಉಜ್ವಲ ಯೋಜನೆಯ ಗ್ರಾಹಕರಿಗೆ ಮೂರು ತಿಂಗಳಿಗೆ ಅನ್ವಯವಾಗುವಂತೆ ಅವರ ಖಾತೆಗೆ ಮುಂಗಡ ಹಣವನ್ನು ಹಾಕುವ ಮುಖೇನ ಈ ಕಠಿಣ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ,ದ.ಕ.ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದ್ದಾರೆ.

Covid- 19 ಕೊ ವೈರಸ್ ನಿಂದ ಉಂಟಾಗಿರುವ ಈ ಸಮಸ್ಯೆಯ ಸಮಯದಲ್ಲಿ ಮನೆ, ಕುಟುಂಬ ಹಾಗೂ ಜೀವನದ ಹಂಗು ತೊರೆದು ನಮಗಾಗಿ ಕೆಲಸ ಮಾಡುತ್ತಿರುವ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬ್ಯಾಂಕ್ ನೌಕರರು, ಅಂಚೆ ಇಲಾಖೆಯ ನೌಕರರು, ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿಗಳು ಹಾಗೂ ಅನಿಲ ಕಂಪನಿಯ ಸಿಬ್ಬಂದಿಗಳಿಗೂ ಹಾಗೂ ಮನೆಮನೆಗಳಿಗೆ ಸಿಲಿಂಡರ್ ತಲುಪಿಸುತ್ತಿರುವ ಅನಿಲ ವಿತರಣೆಯ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು .

https://play.google.com/store/apps/details?id=nic.goi.aarogyasetu

ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಆರೋಗ್ಯ ಸೇತು APP ಅನ್ನು ತಾವೆಲ್ಲರೂ ತಮ್ಮ ತಮ್ಮ ಮೊಬೈಲುಗಳಲ್ಲಿ ಡೌನ್ಲೋಡ್ ಮಾಡಿಕೊಂಡು ಕೊರೋನ ಬಗೆಗಿನ ಜಾಗೃತಿಯ ಮಾಹಿತಿಯನ್ನು ಪಡೆಯಿರಿ ಎಂದು ಮನವಿ ಮಾಡಿದರು.

Leave A Reply

Your email address will not be published.