ಶಿರಾಡಿ ಬಳಿ ಹೆದ್ದಾರಿಯಲ್ಲಿ ಗ್ಯಾಸ್ ತುಂಬಿದ ಟ್ಯಾಂಕರ್ ಪಲ್ಟಿ

ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಅಡ್ಡಹೊಳೆ ಬಳಿ ಗ್ಯಾಸ್ ಲೋಡ್ ಟ್ಯಾಂಕರ್ ಪಲ್ಟಿಯಾದ ಘಟನೆ ನಡೆದಿದೆ.

ಶಿರಾಡಿ ಅಡ್ಡಹೊಳೆ ಪಕ್ಕದ ಕೊಡ್ಯಕಲ್ಲು ತಿರುವಿನಲ್ಲಿ ಗುರುವಾರ ಸಂಜೆ ಆರು ಗಂಟೆಗೆ ಗ್ಯಾಸ್ ಲೋಡ್ ತುಂಬಿಸಿಕೊಂಡು ಮಂಗಳೂರಿನಿಂದ ಬೆಂಗಳೂರು ಕಡೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿದೆ.

ಚಾಲಕನೂ ಅಪಾಯದಿಂದ ಪಾರಾಗಿದ್ದು, ಗ್ಯಾಸ್ ಟ್ಯಾಂಕರ್ ನಲ್ಲಿ ಅನಿಲ ಸೋರಿಕೆ ಇರಲಿಲ್ಲವಾದರೂ ಹೆದ್ದಾರಿಯಲ್ಲಿ ಸಂಚಾರ ತಡೆಹಿಡಿಯಲಾಗಿದ್ದು ಒಂಭತ್ತು ಗಂಟೆಯ ವೇಳೆ ಈ ಟ್ಯಾಂಕರನ್ನು ಕ್ರೇನ್ ಮೂಲಕ ತೆರವುಗೊಳಿಸಿ ಸಂಚಾರಕ್ಕೆ ಹೆದ್ದಾರಿಯನ್ನು ಅನುವು ಮಾಡಿಕೊಡಲಾಗಿದೆ.

Leave A Reply

Your email address will not be published.