ಲಾಕ್ ಡೌನ್ ನ ಮಧ್ಯೆಯೇ ಜೋಡಿಯೊಂದು ಲಾಕ್ ಆಗಿದ್ದಾರೆ | ಮದುವೆಯಲ್ಲಿ ಹಾಜರಾದವರು ಹತ್ತೇ ಜನ !

1 7

ಉಡುಪಿ, ಏಪ್ರಿಲ್ 09 : ರಾಜ್ಯ ಮತ್ತು ದೇಶಾದ್ಯಂತ ಕೊರೊನಾ ವೈರಸ್ ಸಂಬಂಧ ಲಾಕ್ ಡೌನ್ ಆದೇಶ ಮಾಡಿರುವುದರಿಂದ ಮದುವೆ ಹಾಗೂ ಇತರೆ ಜನ ಜಂಗುಳಿ ಸೇರಿರುವ ಸಮಾರಂಭಗಳಿಗೆ ಕಡಿವಾಣ ಹಾಕಲಾಗಿರುವುದು ಎಲ್ಲರಿಗೂ ತಿಳಿದ ವಿಚಾರ.

ಆದರೂ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಲಾಕ್ ಡೌನ್ ಇದ್ದರೂ ಮದುವೆಯೆಯೊಂದು ನೆರವೇರಿದೆ.
ಉಡುಪಿ ಜಿಲ್ಲೆಯ ಕುಂದಾಪುರದ ಅಂಪಾರು ಗುಡಿಬೆಟ್ಟು ನಿವಾಸಿ ಗಿರೀಶ್ ಹಾಗೂ ಪ್ರೀತಿಕಾ ಅವರು ಲಾಕ್ ಡೌನ್ ನಡುವೆಯೇ ಪರಸ್ಪರ ಲಾಕ್ ಇನ್ ಆಗಿದ್ದಾರೆ. ಅತ್ಯಂತ ಸರಳವಾಗಿ ವಿವಾಹ ಸಂಬಂಧ ಬೆಸೆದುಕೊಂಡಿದೆ.

ಹಳ್ನಾಡು ಗಣಪತಿ ದೇವಸ್ಥಾನದಲ್ಲಿ ವಿವಾಹ ನೆರವೇರಿದ್ದು, ಒಂದೊಮ್ಮೆ ಲಾಕ್ ಡೌನ್ ಇಲ್ಲದಿದ್ದರೆ ಇಂದು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಈ ಮದುವೆ ನಡೆಯಬೇಕಿತ್ತು.

ವಿವಾಹದಲ್ಲಿ ವರನ ಕಡೆಯಿಂದ ನಾಲ್ವರು ಹಾಗೂ ವಧುವಿನ ಕಡೆಯಿಂದ ನಾಲ್ವರು, ವಧು-ವರರಿಬ್ಬರು ಸೇರಿ ಒಟ್ಟು ಮಂದಿಯಷ್ಟೇ ಮಾತ್ರ ಭಾಗಿಯಾಗಿದ್ದರು. ಪ್ಲಸ್ ಭಟ್ರು !

ಸಾಮಾಜಿಕ ಅಂತರ ಮನೆಯಲ್ಲಿ ಕೂಡ ಕಾಯ್ದುಕೊಳ್ಳಿ ಎಂದು ಸರಕಾರ ಹೇಳುತ್ತಿದೆ. ಪ್ರತಿಯೊಬ್ಬರೂ ಕನಿಷ್ಠ 3 ಅಡಿ ದೂರದಲ್ಲಿ ಇರಬೇಕೆಂದು ಹೇಳುತ್ತಿದ್ದಾರೆ. ಆದರೆ, ಬೇರೆ ಬೇರೆ ಮನೆಯಿಂದ ಬಂದ ಈ ಜೋಡಿಗೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದರಲ್ಲಿ ವಿನಾಯ್ತಿ ಕೊಡಲೇ ಬೇಕಾಗಿದೆ ! ಬೇರೆ ವಿವರಣೆ ಬೇಕಿಲ್ಲ !!!

Leave A Reply